ಸುಳ್ಯ: ಆಕಸ್ಮಿಕ ಬೆಂಕಿ ಅವಘಡ: ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತ್ಯು
ಸುಳ್ಯ: ಕಳಂಜ ಗ್ರಾಮದ ಬಾಳೆಗುಡ್ಡೆ ಕುಂಞಣ್ಣ ನಾಯ್ಕರ ಪುತ್ರಿ ಕುಸುಮ (41ವರ್ಷ) ಜು. 20ರಂದು ಬೆಳಿಗ್ಗೆ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತೆನಲಾಗಿದೆ.
ಕೂಡಲೇ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 23ರಂದು ಸಂಜೆ ಅವರು ಕೊನೆಯುಸಿರೆಳೆದರು.
ಮೃತರು ತಂದೆ ಸುಳ್ಯ ಲ್ಯಾಂಪ್ ಸೊಸೈಟಿಯ ಉಪಾಧ್ಯಕ್ಷ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ನಿರ್ದೇಶಕ ಕುಂಞಣ್ಣ ನಾಯ್ಕ ಬಾಳೆಗುಡ್ಡೆ, ಸಹೋದರರಾದ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘ ಮತ್ತು ಸುಳ್ಯ ಲ್ಯಾಂಪ್ ಸೊಸೈಟಿ ನಿರ್ದೇಶಕ ಶುಭ ಕುಮಾರ್ ಬಾಳೆಗುಡ್ಡೆ, ಜಯಕುಮಾರ್ ಬಾಳೆಗುಡ್ಡೆ, ಸಹೋದರಿ ಶ್ರೀಮತಿ ಮಮತಾ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.




