September 20, 2024

ಬೆಳ್ತಂಗಡಿ: ಯುವ ಕಾಂಗ್ರೆಸ್ ವತಿಯಿಂದ ರಸ್ತೆ ಹದಗಿಟ್ಟಿರುವ ವಿಚಾರದ ಬಗ್ಗೆ ‘ಗುಂಡಿ ಮುಚ್ಚಿ ಜೀವ ಉಳಿಸಿ’ ಪ್ರತಿಭಟನೆ

0

ಬೆಳ್ತಂಗಡಿ: 20/07/2022 ರಂದು ಬೆಳ್ತಂಗಡಿ ಯುವ ಕಾಂಗ್ರೆಸ್ ವತಿಯಿಂದ ನಡೆಯುವ ಬೆಳ್ತಂಗಡಿಯ ಮುಖ್ಯ ರಸ್ತೆ ಹದಗಿಟ್ಟಿರುವ ವಿಚಾರದ ಬಗ್ಗೆ ‘ಗುಂಡಿ ಮುಚ್ಚಿ ಜೀವ ಉಳಿಸಿ’ ಈ ದ್ಯೇಯ ವಾಕ್ಯದಲ್ಲಿ ಇಂದು ಸಂಜೆ 04 ಗಂಟೆಗೆ ಪ್ರತಿಭಟನೆ ನಡೆಯಿತು.

ಗುಂಡಿಗೆ ಬಾಳೆ ಗಿಡ ನೆಡಲಾಯಿತು:
ಯುವ ಕಾಂಗ್ರೆಸ್‌ನ ಬೆಳ್ತಂಗಡಿ ನಗರ ಅಧ್ಯಕ್ಷರು ಮಾತನಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಚು ಇಂಚಿಗೆ ಅಪಾಯಕಾರಿ ಗುಂಡಿಗಳಿದ್ದು, ಅಪಘಾತಕ್ಕೆ ಕಾರಣವಾಗಿದೆ. ಕನಿಷ್ಠ ಅದನ್ನು ದುರಸ್ತಿ ಮಾಡುವ ಕೆಲಸ ಮಾಡಬೇಕಾದ ಶಾಸಕರು ಮೋಜು ಮಸ್ತಿಯಲ್ಲಿ ನಿರತರಾಗಿದ್ದಾರೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸನ್ಮಾನ ಕಾರ್ಯಕ್ರಮ ನಡೆಸುವ ಬದಲಾಗಿ ಜನರ ಜೀವ ಉಳಿಸುವ ಸಲುವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಲಿ. ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ತಾಲೂಕಿನ ರಾಜ್ಯ ಹೆದ್ದಾರಿಗಳನ್ನು ನೋಡಿದರೆ ಗುಂಡಿಯಲ್ಲಿ ರಸ್ತೆಯೋ ಅಥವಾ ರಸ್ತೆಯಲ್ಲಿ ಗುಂಡಿಯೋ ಎಂಬ ಅನುಮಾನ ಉಂಟಾಗುತ್ತದೆ. ಶಾಸಕ ಹರೀಶ್ ಪೂಂಜಾ ತಾಲೂಕಿನ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವ ಬದಲಾಗಿ ಬೆಳ್ತಂಗಡಿಯಲ್ಲಿ ವಿಮಾನ ನಿಲ್ದಾಣ ಮಾಡ್ತರಂತೆ, ಶಾಸಕರು ಜೋಕರ್ ಆಗದೆ ರಸ್ತೆಗಳಲ್ಲಿರುವ ಗುಂಡಿಯನ್ನು ಮುಚ್ಚದಿದ್ದರೆ ತಾಲೂಕಿನಾದ್ಯಂತ ಗ್ರಾಮ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ.
ಎಂದು ಹೇಳಿದರು.

ಈ ಪ್ರತಿಭಟನೆಯಲ್ಲಿ ನಗರ ಯುವ ಕಾಂಗ್ರೆಸ್ ಅಧ್ಯಕ್ಷರು ಅನಿಲ್ ಪೈ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ಪ್ರವೀಣ್ ಕೊಯ್ಯುರು, ಅಲ್ಪಸಂಖ್ಯಾತ ಘಟಕದ ನಗರ ಅಧ್ಯಕ್ಷ ಸಲೀಂ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವತ್ ರಾಜ್, ಯುವ ಇಂಟಕ್ ಅಧ್ಯಕ್ಷ ನವೀನ್ ಸಾವಣಾಲು, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಂದೀಪ್ ನೀರಲ್ಕೆ, ಪ್ರಜ್ವಲ್ ಜೈನ್, ಗಣೇಶ್ ಕಣಿಯೂರು, ಆರೀಫ್ ಬೆಳ್ತಂಗಡಿಯಲ್ಲಿ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!