ಶಿರೂರು: ಭೀಕರ ಅಂಬ್ಯುಲೆನ್ಸ್ ಅಪಘಾತ: ದನ ಹಾಗೂ ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆಯುವುದ್ದನ್ನು ತಪ್ಪಿಸಲು ಬ್ರೇಕ್ ಹಿಡಿದಾಗ ಪಲ್ಟಿಯಾದ ಅಂಬ್ಯುಲೆನ್ಸ್
ಕುಂದಾಪುರ: ಉತ್ತರಕನ್ನಡ ಜಿಲ್ಲೆ ಹೊನ್ನಾವರದಿಂದ ರೋಗಿಗಳನ್ನು ಸಾಗಿಸುತ್ತಿದ್ದ ಅಂಬುಲೈನ್ಸ್ ಚಾಲಕನ ನಿಯಂತ್ರಣ ತಪ್ಪಿ ಟೋಲ್ ಫ್ಲಾಜಾ ಬಳಿ ಪಲ್ಟಿಯಾದ ಘಟನೆ ಬೈಂದೂರು ತಾಲೂಕಿನ ಶಿರೂರು ಟೋಲ್ ಬಳಿ ಬುಧವಾರ ಸಂಜೆ ನಡೆದಿದೆ. ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.


ಶಿರೂರು ಟೋಲ್ ಗೇಟ್ ನಲ್ಲಿ ಅಪಘಾತ ನಡೆಯುವ ಸಂದರ್ಭದ ಇನ್ನೊಂದು ಸಿಸಿಟಿವಿಯನ್ನು ಗಮನಿಸಿದಾಗ ಅಪಘಾತಕ್ಕೆ ಮತ್ತಷ್ಟು ಕಾರಣಗಳು ಗೊತ್ತಾಗಿದೆ. ರೋಗಿಗಳನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಬೇಕಾದ ಹಿನ್ನೆಲೆ ವೇಗವಾಗಿದ್ದ ಆಂಬ್ಯುಲೆನ್ಸ್ ಶಿರೂರು ಟೋಲ್ ಬರುವ ವೇಳೆ ಅಂಬ್ಯುಲೆನ್ಸ್ ಸೈರನ್ ಕೇಳಿ ಎರ್ಮಜೆನ್ಸಿ ಮಾರ್ಗವನ್ನು ತೆರೆಯಲು ಪ್ರಯತ್ನಿಸಿದ್ದಾರೆ. ಎಮರ್ಜೆನ್ಸಿ ರಸ್ತೆಯಲ್ಲಿ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿದ್ದರು. ಆದರೆ ಅದೇ ಎರ್ಮಜೆನ್ಸಿ ಮಾರ್ಗದಲ್ಲಿ ದನವೊಂದು ಮಲಗಿದ್ದ ಕಾರಣ ಟೋಲ್ ಸಿಬ್ಬಂದಿ ದನವನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಅದರಲ್ಲಿ ವಿಫಲರಾದಗ ರಸ್ತೆಯ ಇನ್ನೊಂದು ಭಾಗದಲ್ಲಿದ್ದ ಬ್ಯಾರಿಕೇಡ್ ತೆರವುಗೊಳಿಸುವಷ್ಟರಲ್ಲಿ ವೇಗದಿಂದ ಬರುತ್ತಿದ್ದ ಅಂಬ್ಯುಲೆನ್ಸ್ ಚಾಲಕ ರಸ್ತೆಯಲ್ಲಿದ್ದ ದನ ಹಾಗೂ ಟೋಲ್ ಸಿಬ್ಬಂದಿಗೆ ಡಿಕ್ಕಿ ಹೊಡೆಯಬಾರದೆಂದು ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿ ಅಂಬ್ಯುಲೆನ್ಸ್ ಪಲ್ಟಿಯಾಗಿದೆ. ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.




