March 26, 2026

ಸಾಲದ ಹೊರೆ ತಾಳಲಾರದೆ ತನ್ನ ಕುಟುಂಬದ ಸದಸ್ಯರೊಂದಿಗೆ ಕಾರಿನೊಳಗೆ ಬೆಂಕಿ ಹಚ್ಚಿಕೊಂಡ ಉದ್ಯಮಿ

0
image_editor_output_image766434153-1658299810030.jpg

ನಾಗ್ಪುರ್: ಸಾಲದ ಹೊರೆ ತಾಳಲಾರದೆ ಉದ್ಯಮಿ ಹಾಗೂ ತನ್ನ ಕುಟುಂಬದ ಸದಸ್ಯರೊಂದಿಗೆ ಕಾರಿನೊಳಗೆ ಬೆಂಕಿ ಹಚ್ಚಿಕೊಂಡಿರುವ ಘಟನೆ ನಾಗ್ಪುರ್ ನಲ್ಲಿ ನಡೆದಿದೆ.

ಘಟನೆಯಲ್ಲಿ ಉದ್ಯಮಿ ಸಾವನ್ನಪ್ಪಿದ್ದು, ಪತ್ನಿ ಮತ್ತು ಮಗ ಬದುಕುಳಿದಿದ್ದು, ತೀವ್ರ ಸುಟ್ಟ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿ ತಿಳಿಸಿದೆ.

ರಾಮ್ ರಾಜ್ ಭಟ್ (58ವರ್ಷ) ಅವರು ಪತ್ನಿ ಮತ್ತು ಮಗನೊಂದಿಗೆ ಊಟದ ನೆಪದಲ್ಲಿ ಹೋಟೆಲ್ ಗೆ ಕರೆದೊಯ್ಯುತ್ತಿದ್ದರು.

ಆದರೆ ಹೋಟೆಲ್ ತಲುಪುವ ಮುನ್ನವೇ ಮಾರ್ಗದಲ್ಲಿ ದಿಢೀರನೇ ಕಾರನ್ನು ನಿಲ್ಲಿಸಿ, ತನ್ನ ಹಾಗೂ ಪತ್ನಿ, ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!