February 3, 2026

ಉಡುಪಿಯ: ಮನೆಗೆ ನುಗ್ಗಿ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಇನ್ನಿತರ ಸಾಮಗ್ರಿಗಳನ್ನು ಕಳವು

0
image_editor_output_image78567184-1658299319132.jpg

ಉಡುಪಿ: ಉಡುಪಿಯ ನಗರ ಭಾಗದಲ್ಲಿರುವ ಮನೆಯೊಂದಕ್ಕೆ ಕನ್ನ ಹಾಕಿರರುವ ಕಳ್ಳರು ಸುಮಾರು 25 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಇನ್ನಿತರ ಸಾಮಾಗ್ರಿಗಳನ್ನು ಕಳವು ಗೈದಿರುವ ಘಟನೆ ನಡೆದಿದೆ.

ಉಡುಪಿ ಕೋರ್ಟ್ ಹಿಂಬದಿ ರಸ್ತೆಯಲ್ಲಿರುವ ರುಕ್ಮಿಣಿ ಕೃಷ್ಣ ಮನೆಯಲ್ಲಿ ವಾಣಿ ವಿ ರಾವ್ ಎಂಬವರು ವಾಸವಾಗಿದ್ದು ಮಂಗಳವಾರ ಜುಲೈ 19 ರ ಬೆಳಿಗ್ಗೆ 10:45 ರಿಂದ ಮದ್ಯಾಹ್ನ 2:10 ರ ನಡುವೆ ಸಮಯದಲ್ಲಿ ಯಾರೋ ಕಳ್ಳರು ಮನೆಯ ಒಳಪ್ರವೇಶಿಸಿ ಕಳ್ಳತನ ಎಸಗಿದ್ದಾರೆ.

ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿ ಇರಿಸಿದ್ದ ಬೂದು ಬಣ್ಣದ ಪರ್ಸ್ ನಲ್ಲಿದ್ದ ರೂಪಾಯಿ 45,000/- ನಗದು ಮತ್ತು ಕಪ್ಪು ಬಣ್ಣದ ವ್ಯಾನಿಟಿ ಬ್ಯಾಗ್‌ನಲ್ಲಿರಿಸಿದ್ದ 5 ಪವನ್ ತೂಕದ ಪಚ್ಚೆಕಲ್ಲು ಇರುವ ಚಿನ್ನದ ಬ್ರೇಸ್‌ಲೇಟ್‌.

ಎರಡು 6 ಪವನ್‌ ತೂಕದ ಮುತ್ತಿನ ಬಳೆ, ಎರಡು 5½ ಪವನ್‌ ತೂಕದ ಚಿನ್ನದ ಖಡಗ ಬಳೆಗಳು, 6 ಪವನ್‌ ತೂಕದ ಚಿನ್ನದ ಸರ ಮತ್ತು 1 ಪವನ್‌ ತೂಕದ ಪೆಂಡೆಂಟ್‌, 6 ಪವನ್‌ ತೂಕದ ಮಲ್ಲಿಗೆ ಮೊಗ್ಗು ಚಿನ್ನದ ಸರ, 1½ ಪವನ್‌ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್‌.

ಎರಡು ಜೊತೆ ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಹರಳಿನ ಬೆಂಡೋಲೆ, ಜುಮ್ಕಿ, ಗ್ರೇನೆಟ್ ಹರಳಿನ ನೆಕ್ಲೇಸ್, ಗ್ರೇನೆಟ್ ಹರಳಿನ ಬಳೆ, ಚಿನ್ನದ ನಾಣ್ಯ, ನಾಲ್ಕು ರೇಷ್ಮೇ ಸೀರೆ ಮತ್ತು ಒಂದು ಸಾಧಾರಣಾ ಸೀರೆಯನ್ನು ಕಳವುಗೈಯಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!