ಮಂಗಳೂರು: ಕೋಳಿ ಅಂಗಡಿಯ ಸಿಬ್ಬಂದಿಗೆ ಹಲ್ಲೆ, ಇಬ್ಬರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು
ಮಂಗಳೂರು: ವೆಲೆನ್ಸಿಯಾ ಜಂಕ್ಷನ್‌ನಲ್ಲಿರುವ ಕೋಳಿ ಅಂಗಡಿಯೊಂದರ ಸಿಬ್ಬಂದಿಯ ಮೇಲೆ ಇತ್ತಿಚೇಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯನ್ನು ಪೊಲೀಸರು ದಾಖಲಿಸಿದ್ದಾರೆ.
ಆರೋಪಿಗಳಾದ ಜಲ್ಲಿಗುಡ್ಡೆ ಬಜಾಲ್‌ನ ನಿವಾಸಿ ಪ್ರೀತಂ ಪೂಜಾರಿ (26), ಯೆಕ್ಕೂರಿನ ನಿವಾಸಿ ಧೀರು ಯಾನೆ ಧೀರಜ್ ಕುಮಾರ್ (27) ಕೊಲೆ ಯತ್ನ, ಅಪಹರಣ, ಕ್ರಿಮಿನಲ್ ಸಂಚು, ಕಳ್ಳಭಟ್ಟಿ ಸಾರಾಯಿ ವ್ಯವಹಾರ, ಗಾಂಜಾ ಸೇವನೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಇನ್ನು ಆರೋಪಿಗಳಾದ ಪ್ರೀತಂ ಪೂಜಾರಿ ಹಾಗೂ ಧೀರಜ್ ಕುಮಾರ್ ಸಮಾಜಕ್ಕೆ ಅಪಾಯಕಾರಿ ಎಂದು ಪರಿಗಣಿಸಲಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಅವರ ಮೇಲೆ ಗೂಂಡಾ ಕಾಯಿದೆಯನ್ನು ದಾಖಲಿಸಲಾಗಿದೆ ಎಂದು ಕಂಕನಾಡಿ ಪೊಲೀಸರು ತಿಳಿಸಿದ್ದಾರೆ.




