ಶಿವಮೊಗ್ಗದ ರೌಡಿ ಶೀಟರ್ ಹತ್ಯೆ ಪ್ರಕರಣ: ಚಿಕ್ಕಮಗಳೂರು ಎಸ್ಪಿ ಮುಂದೆ ಶರಣಾಗಿದ ಆರೋಪಿಗಳು
ಚಿಕ್ಕಮಗಳೂರು: ಐದು ದಿನಗಳ ಹಿಂದೆ ಶಿವಮೊಗ್ಗದ ವಿನೊಭನಗರ ಚೌಕಿ ಬಳಿ ನಡೆದಿದ್ದ ರೌಡಿ ಶೀಟರ್ ಹಂದಿ ಅಣ್ಣಿ ಹತ್ಯೆ ಪ್ರಕರಣದ ಆರೋಪಿಗಳು ಚಿಕ್ಕಮಗಳೂರು ಎಸ್ ಪಿ ಮುಂದೆ ಶರಣಾಗಿದ್ದಾರೆ.
ಹಂದಿ ಅಣ್ಣಿಯ ಹತ್ಯೆ ಪ್ರಕರಣ ಎಂಟು ಮಂದಿ ಆರೋಪಿಗಳು ಚಿಕ್ಕಮಗಳೂರು ಎಸ್ ಪಿ ಅಕ್ಷಯ್ ಮುಂದೆ ಶರಣಾಗಿದ್ದಾರೆ.
ತಡರಾತ್ರಿ ಎಸ್ಪಿ ಕಛೇರಿಗೆ ಆಗಮಿಸಿದ ಎಂಟು ಮಂದಿ ಆರೋಪಿಗಳು ತಾವೇ ಕೊಲೆ ಮಾಡಿರುವುದಾಗಿ ಎಸ್ ಪಿ ಮುಂದೆ ಹೇಳಿಕೊಂಡಿದ್ದಾರೆ. ಬಳಿಕ ಚಿಕ್ಕಮಗಳೂರು ಪೊಲೀಸರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.




