February 2, 2026

ಅಮೆರಿಕಾದ ಡಾಲರ್ ಎದುರು 80ರ ಮಟ್ಟಕ್ಕೆ ಕುಸಿದ ರೂಪಾಯಿ

0
image_editor_output_image1558644607-1658212039316.jpg

ಮುಂಬೈ: ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ಇದೇ ಮೊದಲ ಬಾರಿಗೆ ₹ 80ರ ಮಟ್ಟಕ್ಕೆ ಕುಸಿದಿತ್ತು. ನಂತರ ತುಸು ಚೇತರಿಸಿಕೊಂಡಿತು. ಸೋಮವಾರದ ವಹಿವಾಟಿನ ಕೊನೆಯಲ್ಲಿ ರೂಪಾಯಿಯು ಡಾಲರ್‌ ಎದುರು 16 ಪೈಸೆ ಕುಸಿದು ₹ 79.98ಕ್ಕೆ ತಲುಪಿದೆ.

ಕಚ್ಚಾ ತೈಲದ ಬೆಲೆ ಹೆಚ್ಚಾಗುತ್ತಿರುವುದು ಹಾಗೂ ವಿದೇಶಿ ಬಂಡವಾಳ ಹೊರಹೋಗುತ್ತಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!