ಟಿಪ್ಪು ನಗರದ ಅಯ್ಯೂಬ್ ಖಾನ್ ಕೊಲೆ ಪ್ರಕರಣ: ಆರೋಪಿಯ ಬಂಧನ
ಬೆಂಗಳೂರು: ಟಿಪ್ಪು ನಗರದ ಮಾಜಿ ಕಾರ್ಪೋರೇಟರ್ ನಾಜಿಮಾ ಖಾನಂ ಪತಿ ಅಯೂಬ್ ಖಾನ್‌ರನ್ನು ಹತ್ಯೆಗೈದಿದ್ದ ಸಹೋದರನ ಪುತ್ರ ಮತ್ತಿನ್ ಖಾನ್‌ನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಮಸೀದಿ ಅಧ್ಯಕ್ಷ ಸ್ಥಾನ ಮತ್ತು ಹಣಕಾಸಿನ ವಿಚಾರವಾಗಿ ಕಳೆದ ಬುಧವಾರ ಅಯುಬ್ ಖಾನ್‌ಗೆ ಸಹೋದರನ ಪುತ್ರ ಮತ್ತಿನ್ ಖಾನ್ ಚಾಕುವಿನಿಂದ ಇರಿದು ಕೊಲೆಗೈದಿದ್ದ. ಶುಕ್ರವಾರ ರಹಸ್ಯ ಸ್ಥಳದಲ್ಲಿ ಕುಳಿತು ವಿಡಿಯೋ ಬಿಡುಗಡೆ ಮಾಡಿದ್ದ ಮತ್ತಿನ್ ಖಾನ್ ಕೊಲೆ ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದ.
ಅಲ್ಲದೆ, ಅಯೂಬ್ ಖಾನ್ ಮತ್ತು ಅವರ ಪುತ್ರ ಮಸೀದಿ ಬಳಿ ಹಲ್ಲೆಗೆ ಮುಂದಾಗಿದ್ದರು. ಆಗ ಆತ್ಮರಕ್ಷಣೆಗಾಗಿ ಹಲ್ಲೆ ವೇಳೆ ಚಾಕುವಿನಿಂದ ಇರಿದಿದ್ದೇನೆ ಎಂದು ಹೇಳಿಕೊಂಡಿದ್ದ.
ಆರೋಪಿ ವಿಡಿಯೋ ಬಿಡುಗಡೆ ಮಾಡಿದ ಸ್ಥಳ ಆಧರಿಸಿ ಆರೋಪಿಯನ್ನು ಕೆಂಗೇರಿ ಸಮೀಪದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




