ಸುಳ್ಯ: ಮಳೆ ಬಂದಾಗ ರಸ್ತೆ ತೋಡಾಗಿ ಮಾರ್ಪಾಡು, ವಾಹನ ಸವಾರರ ಪರದಾಟ
ಸುಳ್ಯ: ನಗರದ ಹಳೆಗೇಟು ವಾರ್ಡಿನಲ್ಲಿ ಮಳೆ ಬಂದಾಗ ರಸ್ತೆಗಳೆಲ್ಲಾ ತೋಡಾಗಿ ಮಾರ್ಪಾಡಾಗುತ್ತಿದ್ದು ಇದರಿಂದ ವಾಹನ ಸವಾರರು, ಪಾದಾಚಾರಿಗಳು ಸಂಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ.


ರಸ್ತೆ ಬದಿಗಳಲ್ಲಿ ಇರುವ ಚರಂಡಿಗಳು ಹೂಳು ತುಂಬಿ ಸಂಬಂಧಪಟ್ಟ ಇಲಾಖೆಯವರು, ವಾರ್ಡಿನ ಸದಸ್ಯರುಗಳು ಇತ್ತ ಗಮನ ಹರಿಸದೇ ಇರುವುದು ಇದಕ್ಕೆ ಮೂಲ ಕಾರಣ ಎಂದು ಸ್ಥಳೀಯರು ಇಡಿ ಶಾಪವಾಕುತ್ತಿದ್ದಾರೆ.
ಮಳೆಗಾಲ ಆರಂಭಕ್ಕೂ ಮುನ್ನ ಯಾವುದೇ ಪೂರ್ವಭಾವಿ ಯೋಜನೆಗಳನ್ನು ರೂಪಿಸದೇ ಇರುವುದೇ ಈ ಎಲ್ಲಾ ಅವಾಂತರಗಳಿಗೆ ಕಾರಣ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಕೂಡಲೆ ಕ್ರಮ ಕೈಗೊಳ್ಳಬೇಕಾಗಿದೆ.
ಈ ದುಸ್ಥಿತಿ ಹಳೆಗೇಟು ಜಯನಗರ ಸಂಪರ್ಕಿಸುವ ರಸ್ತೆಯ ಬಳಿ, ಅಡ್ಕ ಜಂಕ್ಷನ್ ಬಳಿ, ರಂಗ ಮನೆಗೆ ತೆರಳುವ ರಸ್ತೆಯ ಬಳಿ, ಹೊಸಗದ್ದೆ ಬಳಿ ಹೀಗೆ ಹತ್ತು ಹಲವಾರು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ಅರಿದು ಕೆರೆಯಂತೆ ಕಾಣುತ್ತಿದೆ.




