ವಿಟ್ಲ: ಮನೆಯ ವಿದ್ಯುತ್ ವೈಯರ್ ಮೇಲೆ ಅಡಿಕೆ ಮರ ಬಿದ್ದು ಮನೆಗೆ ಹಾನಿ
ವಿಟ್ಲ: ಮನೆಯ ವಿದ್ಯುತ್ ಸರ್ವಿಸ್ ವೈಯರ್ ಮೇಲೆ ಅಡಿಕೆ ಮರ ಬಿದ್ದು ಮನೆಗೆ ಹಾನಿಯುಂಟಾದ ಘಟನೆ ವಿಟ್ಲ ಸೇರಾಜೆಯಲ್ಲಿ ನಡೆದಿದೆ.



ವಿಟ್ಲ ಸೇರಾಜೆ ಸಮೀಪದ ವಸಂತ ಮೂಲ್ಯ ಎಂಬವರ ಮನೆಯ ವಿದ್ಯುತ್ ಸರ್ವಿಸ್ ವೈಯರ್ ಮೇಲೆ ಅಡಿಕೆ ಮರ ಬಿದ್ದು ಮನೆಗೆ ಹಾನಿಯುಂಟಾಗಿದ್ದು, ಅಪಾರ ನಷ್ಟ ಉಂಟಾಗಿದೆ.
ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಹರೀಶ್ ವಿಟ್ಲ, ಬಿಜೆಪಿ ವಾರ್ಡ್ ಅಧ್ಯಕ್ಷರಾದ ಹೇಮಚಂದ್ರ ಜೋಗಿಮಠ, ಕಾರ್ಯದರ್ಶಿ ಸುಮತಿ ಕೋಟ್ಯಾನ್, ಸುಂದರ ಪೂಜಾರಿ ಜೋಗಿಮಠ, ನಾಗೇಶ್ ಸುವರ್ಣ ಹಾಗೂ ಹರ್ಷಿತ್ ರವರು ಆಗಮಿಸಿ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಗ್ರಾಮಕರಣಿಕರಾದ ಪ್ರಕಾಶ್ ಹಾಗೂ ರವೀಶ್ ಕುಡೂರು ಭೇಟಿ ನೀಡಿದರು.




