February 3, 2026

ಬೆಲೆ ಏರಿಕೆ ವಿರುದ್ಧ ಶಿವ-ಪಾರ್ವತಿ ವೇಷ ಧರಿಸಿದ ಬೀದಿ ನಾಟಕ ಪ್ರದರ್ಶನ: ವೀಡಿಯೊ ವೈರಲ್ ಬಳಿಕ ವ್ಯಕ್ತಿಯ ವಿರುದ್ಧ ದೂರು ದಾಖಲು

0
image_editor_output_image-825291752-1657789411562.jpg

ಅಸ್ಸಾಂ: ಶಿವ-ಪಾರ್ವತಿ ವೇಷ ಧರಿಸಿದ ರಂಗಭೂಮಿ ಕಲಾವಿದರಿಬ್ಬರು ಬೆಲೆ ಏರಿಕೆ ವಿರುದ್ಧ ವಿನೂತನ ಬೀದಿ ನಾಟಕ ಪ್ರದರ್ಶಿಸಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರ ಗಮನ ಸೆಳೆದಿದೆ. ಕೂಡಲೇ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂಬ ಆರೋಪದಲ್ಲಿ ಶಿವನ ಪಾತ್ರ ನಿರ್ವಹಿಸಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಅಸ್ಸಾಂನಲ್ಲಿ ಜರುಗಿದೆ.

ಅಸ್ಸಾಂನ ನಾಗೋನ್ ನಗರದಲ್ಲಿ ಈ ಬೀದಿ ನಾಟಕ ನಡೆದಿದ್ದು, ಸಾರ್ವಜನಿಕರ ಗಮನೆ ಸೆಳೆದಿದೆ. ಇಬ್ಬರೆ ನಟರು ಶಿವ-ಪಾರ್ವತಿಯ ವೇಷ ಧರಿಸಿ ಹಲವೆಡೆ ನಾಟಕ ಪ್ರದರ್ಶಿಸಿದ್ದಾರೆ.

ಇಂತಹ ವಿನೂತನ ಬೀದಿನಾಟಕವನ್ನು ಅಲ್ಲಿ ನೆರೆದಿದ್ದವರು ಕುತೂಹಲದಿಂದ ವೀಕ್ಷಿಸಿ ಚಪ್ಪಾಳೆ ತಟ್ಟಿ ಬೆಂಬಲಿಸಿದ್ದಾರೆ. ಅಲ್ಲದೆ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಇದನ್ನು ಸಹಿಸದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಯವರು ಬೀದಿ ನಾಟಕ ಮಾಡಿದ ಕಲಾವಿದನ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಎಂದು ಪೊಲೀಸ್ ದೂರು ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!