February 3, 2026

ಬೈಂದೂರಿನಲ್ಲಿ ಕಾರು ಸಹಿತ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ ಮಹಿಳೆಯದು ಅಲ್ಲ, ಗಂಡಸಿನದ್ದು: ತಂಡದಿಂದ ಹತ್ಯೆ

0
IMG-20220714-WA0035.jpg

ಬೈಂದೂರು: ಸುಟ್ಟ ರೀತಿಯಲ್ಲಿ ಪತ್ತೆಯಾದ ಕಾರು ಮತ್ತು ಮೃತದೇಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ಮತ್ತೆ ಟ್ವಿಸ್ಟ್ ಪಡೆದುಕೊಂಡಿದೆ. ಮೃತದೇಹ ಸುಟ್ಟ ರೀತಿಯಲ್ಲಿ ಪತ್ತೆಯಾದ ಕಾರಣ ಇದು ಕೊಲೆಯೋ ಆತ್ಮಹತ್ಯೆಯೋ ಮತ್ತು ಈ ಮೃತದೇಹ ಹೆಣ್ಣಿನದ್ದೋ ಅಥವಾ ಗಂಡಿನಂದೋ ಎಂಬ ಹಲವು ಸಂಶಯಗಳು ಮೂಡಿತ್ತು. ಪೊಲೀಸರ ಪ್ರಾಥಮಿಕ ತನಿಖೆಯಿಂದ ಮೃತದೇಹ ಗಂಡಿಸಿನದ್ದು ಎಂದು ತಿಳಿದು ಬಂದಿದ್ದು, ಕೊಲೆ ಪ್ರಕರಣವೆಂದು ದಾಖಲಾಗಿದೆ.

ಮಂಗಳವಾರ ರಾತ್ರಿ 10.30 ರಿಂದ 11 ಗಂಟೆಯ ಸಮಯದಲ್ಲಿ ಕಾರು ಸಾಸ್ತಾನ ಟೋಲ್ ಗೇಟ್ ದಾಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತು ಕಾರಿನಲ್ಲಿ ಮಹ್ಇಳೆ ಮತ್ತು ಓರ್ವ ವ್ಯಕ್ತಿ ಇದ್ದದ್ದು ಗೊತ್ತಾಗುತ್ತಿದೆ. ಇನ್ನೂ ಪೊಲೀಸರ ತನಿಖೆಯಿಂದ ಇದೊಂದು ಕೊಲೆ ಪ್ರಕರಣವೆಂದು ಗೊತ್ತಾಗಿದ್ದು. ಕಾರಿನಲ್ಲಿದ್ದ ಮಹಿಳೆ ಕೂಡ ಪ್ರಕರಣ ಆರೋಪಿ ಹಾಗೂ ಕೊಲೆಯ ಹಿಂದೆ ಒಂದು ತಂಡವಿದೆ ಎಂದು ತಿಳಿದುಬಂದಿದೆ. ಈಗಾಗಲೇ ಪೊಲೀಸರಿಗೆ ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು ಶೀಘ್ರದಲ್ಲೇ ಬಂಧನವಾಗುವ ಸಾಧ್ಯತೆಯಿದೆ. ಆರೋಪಿಗಳ ಬಂಧನದ ಬಳಿಕ ಯಾವ ಕಾರ್‍ಅಣಕ್ಕಾಗಿ ಕೊಲೆ ನಡೆದಿದೆ ಎನ್ನುವುದು ಗೊತ್ತಾಗಬೇಕಿದೆ.

Leave a Reply

Your email address will not be published. Required fields are marked *

error: Content is protected !!