ಮೂಡಿಗೆರೆ: ತಾಲೂಕಿನ ಸಬ್ಲಿ ಎಂಬಲ್ಲಿ ಗುರುವಾರ ಭಾರಿ ಮಳೆಗೆ ಸರ್ಕಾರಿ ಶಾಲೆ ಕುಸಿದು ಬಿದ್ದಿದ್ದು, ಅದೃಷ್ಟವಷಾತ್ ಶಾಲೆಗೆ ರಜೆ ಇದುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
ಒಂದನೇ ತರಗತಿಯಿಂದ 5ನೇ ತರಗತಿವರೆಗೂ 60 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಈ ಶಾಲೆಯಲ್ಲಿ ನಾಲ್ಕು ಕೊಠಡಿಗಳಿದ್ದು ಒಂದು ಕೊಠಡಿ ಸಂಪೂರ್ಣ ನೆಲಸಮವಾಗಿದೆ.

