June 12, 2026

ಇನ್‌ಸ್ಟಾಗ್ರಾಂನಲ್ಲಿ ಸ್ನೇಹಿತರ ನಡುವೆ ವಾಗ್ವಾದ: ಚಾಕುವಿನಿಂದ ಇರಿದು ಓರ್ವನ ಹತ್ಯೆ

0
image_editor_output_image446621962-1657778107812.jpg

ಮೈಸೂರು: ಇನ್‌ಸ್ಟಾಗ್ರಾಂನಲ್ಲಿ ಸ್ನೇಹಿತರ ನಡುವೆ ವಾಗ್ವಾದವುಂಟಾಗಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ನಗರದ ಎಪಿಎಂಸಿ ಜಂಕ್ಷನ್ ಬಳಿ ಮಂಗಳವಾರ ನಡೆದಿದೆ.

ಹುಣಸೂರು ತಾಲೂಕಿನ ಅಂಗಟಹಳ್ಳಿಯ ನಿವಾಸಿ ಬೀರೇಶ್(23) ಮೃತ ವ್ಯಕ್ತಿ. ಈತನ ಸ್ನೇಹಿತರಾದ ಗೋಕುಲ್ ರಸ್ತೆಯ ಕುಟ್ಟಿ ಜಿಮ್‌ನ ತರಬೇತುದಾರ ನಿತಿನ್ ಅಲಿಯಾಸ್ ವಠಾರ  ಹಾಗೂ ಕಲ್ಕುಣಿಕೆಯ ಮನು ಆರೋಪಿಗಳು.

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯನ್ನು ನಾಲ್ಕು ತಿಂಗಳ ಹಿಂದೆ ಪ್ರೀತಿಸಿ ಕೊಲೆ ಆರೋಪಿ ನಿತಿನ್ ಮದುವೆಯಾಗಿದ್ದ. ಯುವತಿ ಆರ್ಥಿಕವಾಗಿ ಸಬಲಳಾಗಿದ್ದಳು. ಮದುವೆ ಬಗ್ಗೆ ಬೀರೇಶ್ ಕಾಮೆಂಟ್ ಮಾಡಿದ್ದ.

ನಿತಿನ್ ಮದುವೆ ವಿಚಾರವನ್ನ ಪ್ರಸ್ತಾಪಿಸಿ ಬಿರೇಶ್ ಹೆಂಡತಿನ ನೋಡ್ಕೊಳಕೆ ಆಗಲ್ಲಾ ಅಂದ ಮೇಲೆ ಮದುವೆ ಯಾಕ ಬೇಕು ಎಂದು ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ.

ಇದನ್ನ ಗಮನಿಸಿದ ನಿತಿನ್ ಕಮೆಂಟ್ ಫೋಟೋ ತೆಗದು ಎಲ್ಲಾ ಸ್ನೇಹಿತರಿಗೂ ಕಳುಹಿಸಿದ್ದಾನೆ. ಕಳೆದ ಒಂದು ವಾರದಿಂದ ಈ ವಿಚಾರವಾಗಿ ಬಿರೇಶ್ ಮತ್ತು ನಿತಿನ್ ನಡುವೆ ಜಗಳ ನಡೆಯುತ್ತಲ್ಲೇ ಇತ್ತು.

ಮಧ್ಯಾಹ್ನ ನಿನ್ನ ಜೊತೆ ಮಾತನಾಡಬೇಕು ಬಾ ಬಿರೇಶನನ್ನ ಬೈಕ್ ನಲ್ಲಿ ಕುರಿಸಿಕೊಂಡು ನಿತಿನ್ ಮತ್ತು ಮನೋಜ್ ತ್ರಿಬಲ್ ರೈಡ್ ಹೊರಟಿದ್ದಾರೆ.  ಹುಣುಸೂರು ನಗರದ ಸರಸ್ವತಿ ಪ್ಲಾಜಾ ಬಳಿ ಬರುತ್ತಿದಂತೆ ಹಿಂಬದಿಯಲ್ಲಿ ಕುಳಿತಿದ್ದ ನಿತಿನ್ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಬೈಕ್ ನಿಂದ ಬಿರೇಶ್ ಕೆಳಗೆ ಬಿದ್ದಿದ್ದಾನೆ.

ರಕ್ತದ ಮಡುವಿನಲ್ಲಿದ್ದ ಬಿರೇಶ್ ನನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಬಿರೇಶ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾನೆ.

ಮೃತನ ಪೋಷಕರು ನಿತಿನ್ ಮತ್ತು ಮನೋಜ್ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!