February 2, 2026

ಬ್ರಹ್ಮಾವರ: ಆಟವಾಡಲೆಂದು ತೆರಳಿದ್ದ ಬಾಲಕ ನೀರಿನ ಹೊಂಡಕ್ಕೆ ಬಿದ್ದು ಸಾವು

0
image_editor_output_image1875847254-1657777408663.jpg

ಬ್ರಹ್ಮಾವರ: ಆಟವಾಡಲೆಂದು ತೆರಳಿದ್ದ ಬಾಲಕ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ಬ್ರಹ್ಮಾವರದ ಬಳಿ ಬುಧವಾರ ನಡೆದಿದೆ.

ಮೃತ ಬಾಲಕನನ್ನು ನೋರ್ಮನ್ ಮತ್ತು ಸಿಲ್ವಿಯ ಎಂಬವರ 5 ವರ್ಷದ ಪುತ್ರ ಲಾರೆನ್ ಲೂವಿಸ್ ಎಂದು ಗುರುತಿಸಲಾಗಿದೆ.

ಬ್ರಹ್ಮಾವರ ತಾಲೂಕು ಉಪ್ಪೂರು ತೆಂಕಬೆಟ್ಟು ಬಳಿ ಈ ಘಟನೆ ನಡೆದಿದ್ದು, ಇವರು ಕುವೈಟ್ ನಲ್ಲಿ ವಾಸವಾಗಿದ್ದು ಇತ್ತೀಚೆಗಷ್ಟೇ ಊರಿಗೆ ಮರಳಿದ್ದರು.

ಮನೆಯ ಪಕ್ಕ ಆಟವಾಡುತ್ತಿದ್ದಾಗ ನೀರಿನ ಹೊಂಡಕ್ಕೆ ಬಿದ್ದು ಮಗು ದಾರುಣವಾಗಿ ಸಾವನ್ನಪ್ಪಿದೆ.

Leave a Reply

Your email address will not be published. Required fields are marked *

error: Content is protected !!