ಮುಂಡೂರು: ಅಪಾಯಕಾರಿ ಮರವನ್ನು ತೆರವುಗೊಳಿಸಲು ಎಸ್‌ಡಿಪಿಐ ವತಿಯಿಂದ ಗ್ರಾಮ ಪಂಚಾಯಿತಿಗೆ ಮನವಿ
ಪುತ್ತೂರು: ಮುಂಡೂರು ಗ್ರಾಮದ ಕೊಡೀನಿರು ಎಂಬಲ್ಲಿ ರಸ್ತೆಗೆ ವಾಲಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿ ಇರುವ ಮರವನ್ನು ತೆರವುಗೊಳಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸುವಂತೆ ಆಗ್ರಹಿಸಿ ಎಸ್‌ಡಿಪಿಐ ಮುಂಡೂರು ಬೂತ್ ಸಮಿತಿ ವತಿಯಿಂದ ಮುಂಡೂರು ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಲಾಯಿತು.
ನಿಯೋಗದಲ್ಲಿ ಎಸ್‌ಡಿಪಿಐ ಮುಂಡೂರು ಬೂತ್ ಸಮಿತಿಯ ಅಧ್ಯಕ್ಷರಾದ ಶಾಕಿರ್ ಪಾಪೆತಡ್ಕ ಜೊತೆ ಕಾರ್ಯದರ್ಶಿಯಾದ ಹಾರಿಸ್ ಕೊಡೀನಿರು, ಹಾಯಾಝ್ ಪಾಪೆತಡ್ಕ, ನಾಸಿರ್ ಪಾಪೆತಡ್ಕ ಉಪಸ್ಥಿತರಿದ್ದರು.




