ಮೂಡುಬಿದಿರೆ: ಗುಡ್ಡದಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಪೊಲೀಸರ ದಾಳಿ: ಐದು ದನಗಳ ರಕ್ಷಣೆ
ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಡೇಲು ಗುಡ್ಡಗಾಡು ಪ್ರದೇಶದಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಪ್ರದೇಶಕ್ಕೆ ಮೂಡುಬಿದಿರೆ ಪೊಲೀಸರು ದಾಳಿ ನಡೆಸಿ, ಐದು ದನಗಳನ್ನು ರಕ್ಷಿಸಿದ್ದಾರೆ.
ಹಂಡೇಲು ನಿವಾಸಿ ಹಸನ್‌ಬಾವ ತನ್ನ ಕುಟುಂಬಸ್ಥರ ಜೊತೆ ಕಸಾಯಿಖಾನೆ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ನಿರಂಜನ್ ಕುಮಾರ್, ಉಪನಿರೀಕ್ಷಕರರಾದ ಸುದೀಪ್, ಸಿದ್ದಪ್ಪ, ದಿವಾಕರ್ ರೈ ಸಹಿತ ಸಿಬ್ಬಂದಿಗಳ ತಂಡ ದಾಳಿ ನಡೆಸಿದ್ದು, ಐದು ದನಗಳು, ದನದ ಚರ್ಮ, ಅವುಗಳ ವಧೆಗೆ ಬಳಸುತ್ತಿದ್ದ ಆಯುಧಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪರಾರಿಯಾಗಿದ್ದಾರೆ.


