February 2, 2026

ಅರ್ಕುಳ ಕೋಟೆಯಲ್ಲಿ ಅಕ್ರಮವಾಗಿ ಗೋ ಮಾಂಸ ಮಾರಾಟ: ಆರೋಪಿಯ ಆಸ್ತಿ ಮುಟ್ಟುಗೋಲಿಗೆ ನೋಟಿಸ್ ಜಾರಿ

0
image_editor_output_image1543509810-1657270173596.jpg

ಮಂಗಳೂರು: ಅರ್ಕುಳ ಕೋಟೆಯಲ್ಲಿ ಅಕ್ರಮವಾಗಿ ಗೋ ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿ ಬಾತೀಶ್‌ನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರು (ಎಸಿ) ನೋಟಿಸ್ ನೀಡಿದ್ದಾರೆ.

ಆರೋಪಿ ಬಾತೀಶ್ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಜುಲೈ 3 ರಂದು ಗ್ರಾಮಾಂತರ ಪೊಲೀಸರು ದಾಳಿ ನಡೆಸಿ 95 ಕೆಜಿ ದನದ ಮಾಂಸ, ತೂಕದ ತಕ್ಕಡಿ, ಕತ್ತಿಗಳು, ಮರದ ದಿಮ್ಮಿ ಇತ್ಯಾದಿಗಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಎ ಕೆ ಖಾಲಿದ್ ಎಂಬುವರ ಮನೆಯ ಪಕ್ಕದ ಶೆಡ್‌ನಲ್ಲಿ ಈ ಅಕ್ರಮ ನಡೆಸುತ್ತಿದ್ದು, ಪೊಲೀಸರು ದಾಳಿ ನಡೆಸಿದಾಗ ಆತ ಸ್ಥಳದಿಂದ ಪರಾರಿಯಾಗಿದ್ದಾನೆ.

ಇನ್ನು ಆರೋಪಿಯು ಯಾವುದೇ ಅನುಮತಿಯಿಲ್ಲದೆ ಜಾನುವಾರುಗಳನ್ನು ಕೊಂದಿರುವ ಕಾರಣ, ಕೃತ್ಯ ಎಸಗಿದ ಸ್ಥಳವನ್ನು ಜಪ್ತಿ ಮಾಡುವ ಬಗ್ಗೆ ವಿಚಾರಣೆಯನ್ನು ಜುಲೈ 12 ರಂದು ಮಧ್ಯಾಹ್ನ 3 ಗಂಟೆಗೆ ಎಸಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಎಸಿ ಸಲ್ಲಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!