March 26, 2026

ಬಂಟ್ವಾಳ: ಭಾರೀ ಮಳೆಗೆ ಗುಡ್ಡ ಕುಸಿತ: ಮೂವರು ಕಾರ್ಮಿಕರು ನಾಪತ್ತೆ, ಓರ್ವನ ರಕ್ಷಣೆ

0
IMG-20220706-WA0015.jpg

ಬಂಟ್ವಾಳ: ಭಾರೀ ಮಳೆಗೆ ಗುಡ್ಡ ಕುಸಿದ ಪರಿಣಾಮದಿಂದ ಮೂವರು ಕಾರ್ಮಿಕರು ನಾಪತ್ತೆಯಾಗಿದ್ದು, ಓರ್ವನನ್ನು ರಕ್ಷಣೆ ಮಾಡಿರುವ ಘಟನೆ ತಾಲೂಕಿನ ಪಂಜಿಕಲ್ಲು ಎಂಬಲ್ಲಿ ನಡೆದಿದೆ. ನಾಲ್ವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಹೆನ್ರಿ ಕಾರ್ಲೊ ಎಂಬವರಿಗೆ ಸೇರಿದ ಮನೆಯ ಹೊರಗಿರುವ ಕೊಠಡಿಗೆ ಗುಡ್ಡ ಜರಿದು ಬಿದ್ದ ಘಟನೆ ಇಂದು ರಾತ್ರಿ ವೇಳೆ ನಡೆದಿದೆ.
ಕಾರ್ಲೋ ಅವರ ಮನೆಯ ತೋಟದ ಕೆಲಸಕ್ಕೆ ಉತ್ತರಕನ್ನಡ ಮೂಲದ ವ್ಯಕ್ತಿಗಳು ಮನೆಯೊಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.

ನಾಲ್ವರು‌ ಅನೇಕ ವರ್ಷಗಳಿಂದ ಇವರ ತೋಟದ ಕೆಲಸ ಮಾಡುತ್ತಿದ್ದ ಮನೆಯ ಹತ್ತಿದರಲ್ಲಿ ಪ್ರತ್ಯೇಕ ಕೊಠಡಿ ಅವರಿಗೆ ನೀಡಲಾಗಿತ್ತು. ಇಂದು ಮನೆಯ ಸಮೀಪದ ಗುಡ್ಡ ಜರಿದು ಮಣ್ಣಿನ ಜೊತೆ ಇವರಿದ್ದ ಕೊಠಡಿ ನೆಲಸಮವಾಗಿದೆ. ಪ್ರಸ್ತುತ ಅದರೊಳಗಿರುವ ನಾಲ್ವರಿಗಾಗಿ ಜೆಸಿಬಿ ಬಳಸಿ ಮಣ್ಣು ತೆರವುಮಾಡಿ ಶೋಧ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!