ಸುಳ್ಯ: ನಗರ ಪಂಚಾಯತ್ ಪೌರಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ
ಸುಳ್ಯ: ನಗರ ಪಂಚಾಯತ್ ಕಚೇರಿಯಲ್ಲಿ ಕಸ ವಿಂಗಡಣೆಯ ಮತ್ತು ಕಸ ಸಂಗ್ರಹದ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಮೃತ ವ್ಯಕ್ತಿ ಸುಳ್ಯ ತಾಲೂಕಿನ ದುಗಲಡ್ಕ ನಿವಾಸಿ ದೇವನಾಥ (32) ವರ್ಷ ಎಂದು ತಿಳಿದು ಬಂದಿದೆ.
ನಿನ್ನೆ ಮಧ್ಯಾಹ್ನ ಸುಳ್ಯದ ಕೊಡಿಯಾಲಬೈಲು ಸೇತುವೆಯಲ್ಲಿ ಕುಳಿತು ಆತ ವಿಷ ಸೇವಿಸಿದರೆನ್ನಲಾಗಿದೆ. ಅವರು ವಿಷ ಸೇವಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತು ಅವರ ಗೆಳೆಯರು ಧಾವಿಸಿ ಕುಡಿದ ವಿಷವನ್ನು ವಾಂತಿ ಮಾಡಿಸುವ ಪ್ರಯತ್ನ ಮಾಡಿ ಆಸ್ಪತ್ರೆಗೆ ಕರೆತಂದರು. ಪರಿಸ್ಥಿತಿ ಗಂಭೀರವಾಗಿದ್ದುದರಿಂದ ಬಳಿಕ ಸುಳ್ಯದಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ರಾತ್ರಿ 2 ಗಂಟೆಗೆ ದೇವನಾಥ ಕೊನೆಯುಸಿರೆಳೆದರು.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತದೇಹ ಈಗ ವೆನ್ಲಾಕ್ ಆಸ್ಪತ್ರೆಯಲ್ಲಿದ್ದು ಮರಣೋತ್ತರ ಶವ ಪರೀಕ್ಷೆಯ ಬಳಿಕ ಸುಳ್ಯಕ್ಕೆ ತರಬೇಕಾಗಿದೆ.
ಮೃತರು ತಾಯಿ ಸುಂದರಿ, ಸಹೋದರ ವಸಂತ, ಸಹೋದರಿ ಲಕ್ಷ್ಮಿ , ಅತ್ತಿಗೆ ನ.ಪಂ.ಸದಸ್ಯೆ ಶಶಿಕಲಾ ನೀರಬಿದಿರೆಯವರನ್ನು ಅಗಲಿದ್ದಾರೆ.




