ಬಂಟ್ವಾಳ: ನೇತ್ರಾವತಿ ನದಿಗೆ ಈಜಲು ಹೋಗಿರುವ ಕಾಲೇಜು ಬಾಲಕರ ತಂಡ: ಓರ್ವ ನೀರು ಪಾಲು, ಇನ್ನೋರ್ವ ಆಸ್ಪತ್ರೆಗೆ ದಾಖಲು
ಬಂಟ್ವಾಳ: ತಾಲೂಕಿನ ಸಜೀಪ ಪಡು ಗ್ರಾಮದ ತಲೆಮೊಗರು ಎಂಬಲ್ಲಿ ನೇತ್ರಾವತಿ ನದಿಗೆ ಭೋರ್ಗರೆಯುವ ನೇತ್ರಾವತಿ ನದಿಗೆ ಈಜಲು ಎಂದು ಹೋಗಿರುವ ಐವರು ಸ್ನೇಹಿತ ಬಾಲಕರ ತಂಡ, ಇದರಲ್ಲಿ ಓರ್ವ ಯುವಕ ನೀರು ಪಾಲಾದರೆ ಇನ್ನುಳಿದ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಅದರಲ್ಲಿ ಓರ್ವ ಬಾಲಕ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಅಪಾಯವಿಲ್ಲ ಎಂದು ಹೇಳಲಾಗುತ್ತಿದೆ.
ತಲೆಮೊಗರು ನಿವಾಸಿ ರುಕ್ಮಯ ಅವರ ಮಗ ಅಶ್ವಿಥ್ (19) ನೀರು ಪಾಲಾದ ಯುವಕ. ಹರ್ಷಿತ್ ಮಂಗಳೂರು ಖಾಸಗಿ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಉಳಿದಂತೆ ಸ್ನೇಹಿತ ರಾದ ಲಿಖಿತ್, ವಿಕೇಶ್, ವಿಶಾಲ್ ಅವರನ್ನು ರಕ್ಷಣೆ ಮಾಡಲಾಗಿದೆ.
ಸ್ನೇಹಿತರಾದ ಐವರು ಸಂಜೆ 4 ಗಂಟೆ ವೇಳೆಗೆ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದಾರೆ ಎಂದು ಹೇಳಲಾಗಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಮಿತಿಮೀರಿ ಹರಿಯುತ್ತಿದ್ದು, ಅಪಾಯಕಾರಿ ಎಂದು ಗೊತ್ತಿದ್ದು, ಮಕ್ಕಳು ಈ ರೀತಿಯಲ್ಲಿ ನದಿಗೆ ಇಳಿಯುವುದರ ಬಗ್ಗೆ ಮನೆಯವರು ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ನೀರು ಪಾಲಾದ ಅಶ್ವಿಥ್ ನ ಪತ್ತೆಗಾಗಿ ಸ್ಥಳೀಯ ಮುಳುಗು ತಜ್ಞರ ಸಹಾಯ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ಮೂಲಕ ಹುಡುಕಾಟ ನಡೆಸಿದ್ದಾರೆ. ಆದರೆ ರಾತ್ರಿಯಾದರೂ ಹರ್ಷಿತ್ ಪತ್ತೆಯಾಗಿಲ್ಲ.




