ವಿಟ್ಲ: ಭಾರೀ ಮಳೆಗೆ ಮನೆಗೆ ಹಾನಿಗೆ: ಅಪಾಯದಲ್ಲಿ ಮನೆಗೆ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಭೇಟಿ
ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಪಿಲಿಂಜ ಹರಿಜನ ಕಾಲೋನಿ ನಿವಾಸಿ ಶೇಷಪ್ಪ ನಲಿಕೆ ಎಂಬವರ ಮನೆಯು ವೀಪರೀತ ಮಳೆಗೆ ಮನೆಯ ಎಡ ಭಾಗವು ಕುಸಿದಿದ್ದು ಮನೆಯು ಕೂಡ ಕುಸಿಯುವ ಹಂತದಲ್ಲಿದೆ. ತೀರ ಬಡವರಾದ ಇವರು ಮನೆಯು ಕುಸಿದಲ್ಲಿ ವಾಸಿಸಲು ಮನೆಯಿಲ್ಲದೆ ಸಂಕಷ್ಟ ಪಡುವ ಪರಿಸ್ಥಿತಿ ಯಲ್ಲಿದ್ದಾರೆ. ಈ ವಿಚಾರವನ್ನು ಸ್ಥಳಿಯರಾದ ಎಲ್ಯಣ್ಣ ಪೂಜಾರಿಯವರು ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ತಿಳಿಸಿದಾಗ ಕೂಡಲೆ ಅವರ ಮನೆಗೆ ಖುದ್ದು ಭೇಟಿ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಇದಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಸಹಕರಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜೇಶ್ ಪಿಲಿಂಜ ಇವರು ಮನೆ ನಿರ್ಮಾಣ ಮಾಡುತ್ತಿದ್ದು ಇವರ ಮನೆ ನಿರ್ಮಾಣ ಸ್ಥಳಕ್ಕೆ ಭೇಟಿ ಮಾಡಿದರು , ಬಡವರಾದ ಇವರ ಮನೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಹಕರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಎಲ್ಯಣ್ಣಪೂಜಾರಿ ಹಲಸಿನ ಕಟ್ಟೆ , ಲೋಹಿತ್ ಪಿಲಿಂಜ , ವೀರಪ್ಪ ಪೂಜಾರಿ ಬದಿಗುಡ್ಡೆ , ಶ್ರೀನಿವಾಸ ಪೂಜಾರಿ ಬಡಿಗುಡ್ಡೆ , ನಾರಾಯಣ ಪೂಜಾರಿ ಬದಿಗುಡ್ಡೆ , ಸಂದೀಪ್ ಪಿಲಿಂಜ , ಪ್ರಜ್ವಲ್ ಪಿಲಿಂಜ , ಪೂವಪ್ಪ ಕುಕ್ಕುದಡ್ಕ , ಶಶೀಧರ್ ಕಳುವಾಜೆ, ಜಗನಾಥ ಮೂಲ್ಯ , ಕ್ರಷ್ಣ ಗೌಡ ಪಿಲಿಂಜ , ಚಂದ್ರ ಗೌಡ ಪಿಲಿಂಜ , ಚಂದ್ರಹಾಸ ಹಲಸಿನಕಟ್ಟೆ , ತಾರಾನಾಥ ಪಿಲಿಂಜ , ಸತೀಶ್ ಪೂಜಾರಿ ಪಿಲಿಂಜ , ರಾಮಣ್ಣ ಪಿಲಿಂಜ , ಕುಜುಂಬ ನಲಿಕೆ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಿಲಿಂಜ ಪಿಲಿಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಮುದಾಯ ಭವನವು ಎರಡು ವರ್ಷದ ಹಿಂದೆ ಪ್ರಾರಂಭವಾಯಿತು ಆದರೆ ಆರ್ಥಿಕ ಕೊರತೆಯ ಸಮಸ್ಯೆ ಯಿಂದ ಕಾಮಗಾರಿ ಸ್ಥಗಿತಗೊಂಡಿರುತ್ತದೆ. ಇಲ್ಲಿಗೂ ಬಿಲ್ಲವ ಸಂಘದ ಕಾರ್ಯ ಕರ್ತರ ಮನವಿ ಮೇರೆಗೆ ಭೇಟಿ ನೀಡಿದರು , ಈ ಸಮುದಾಯ ಭವನದ ನಿರ್ಮಾಣಕ್ಕೆ ನನ್ನಿಂದಾಗುವ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಕಾರ್ಯಕರ್ತರು ಉಪಸ್ಥಿತರಿದ್ದರು.