August 25, 2026

ಸುಳ್ಯ: ವಿದ್ಯುತ್ ಅಪಘಾತದಿಂದ 6 ವರ್ಷದ ಬಾಲಕ ಮೃತ್ಯು

0
IMG-20220702-WA0022.jpg

ಸುಳ್ಯ: ಅಜ್ಜನ ಮನೆಗೆ ಬಂದಿದ್ದಾಗ ಫ್ರಿಡ್ಜ್ ನಲ್ಲಿ ವಿದ್ಯುತ್ ಅಪಘಾತ ಸಂಭವಿಸಿ 6 ವರ್ಷದ ಬಾಲಕ ಮೃತಪಟ್ಟ ಘಟನೆ ಐವರ್ನಾಡಿನಲ್ಲಿ ನಡೆದಿದೆ.

ಐವರ್ನಾಡಿನ ಕೈವಲ್ತಡ್ಕ ಆದಂ ಎಂಬವರ ಪುತ್ರಿ ಅಪ್ಸ ಹಾಗೂ ಹೈದರಾಲಿ ರವರ ಪುತ್ರ ಆದಿಲ್ ಮೃತಪಟ್ಟ ಬಾಲಕ.

ಮೂಲತ ಪುತ್ತೂರು ತಾಲೂಕಿನ ಕುಂಬ್ರ ದಲ್ಲಿ ತನ್ನ ತಂದೆ ತಾಯಿಯೊಂದಿಗೆ ವಾಸಿಸುತ್ತಿದ್ದ ಆದಿಲ್ ಐವರ್ನಾಡಿನ ತನ್ನ ಅಜ್ಜನ ಮನೆಗೆ ಬಂದಿದ್ದ. ಬಾಲಕನ ಸಹೋದರ ಅಫ್ರಾಜ್ ಐವರ್ನಾಡಿನಲ್ಲಿ ತನ್ನ ಅಜ್ಜನ ಮನೆಯಲ್ಲಿ ಇದ್ದು, ಸರ್ಕಾರಿ ಶಾಲೆಯಲ್ಲಿ ಎರಡನೆಯ ತರಗತಿ ವಿದ್ಯಾರ್ಥಿಯಾಗಿದ್ದ. ಈ ಕಾರಣದಿಂದ ಆದಿಲ್ ತಂದೆ ತಾಯಿ ಯೊಂದಿಗೆ ಆಗಾಗ ಐವರ್ನಾಡಿಗೆ ಬರುತ್ತಿದ್ದ.

ಅಪರಾಹ್ಮ ಎರಡು ಗಂಟೆಗೆ ಈ ದುರ್ಘಟನೆ ಸಂಭವಿಸಿದ್ದು, ಶಾಕ್ ನಿಂದ ಗಂಭೀರವಾಗಿದ್ದ ಆದಿಲ್ ನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಪ್ರಾಣ ಕಳೆದುಕೊಂಡಿದ್ದ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!