August 25, 2026

ವಿಟ್ಲ: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ: ತಾತ್ಕಾಲಿಕ ಕಾಮಗಾರಿ ಕೈಗೆತ್ತಿಕೊಂಡ ಪ.ಪಂಚಾಯತ್

0
IMG-20220701-WA0058.jpg

ವಿಟ್ಲ: ಭಾರೀ ಮಳೆಗೆ ಹಲವು ಮನೆಗಳು ಜಲಾವೃತಗೊಂಡ ಘಟನೆಗೆ ಸಂಬಂಧಿಸಿ, ವಿಟ್ಲ ಪಟ್ಟಣ ಪಂಚಾಯತ್ ತಾತ್ಕಾಲಿಕ ಕಾಮಗಾರಿ ಕೈಗೆತ್ತಿಕೊಂಡಿದೆ.

ವಿಟ್ಲದ ಅಡ್ಡಬೀದಿ, ಬೊಬ್ಬೇಕೇರಿಯ ವಿದ್ಯಾನಗರ ಮೊದಲಾದ ಕಡೆಗಳಲ್ಲಿ ಭಾರೀ ಮಳೆಗೆ ಹಲವು ಮನೆಗಳಿಗೆ ನೀರು ನುಗ್ಗಿ ಭಾರೀ ತೊಂದರೆ ಅನುಭವಿಸಿದ್ದರು. ಬಳಿಕ ವಿಟ್ಲ ಪಟ್ಟಣ ಪಂಚಾಯತ್ ತಾತ್ಕಾಲಿಕವಾಗಿ ಚರಂಡಿಯನ್ನು ದುರಸ್ತಿಗೊಳಿಸಿದರು. ಮುಚ್ಚಿದ ಚರಂಡಿಯನ್ನು ತೆರೆದು ನೀರು ಹೋಗಲು ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!