March 24, 2026

ವಿಟ್ಲ: ಉದ್ಯಮಿ ಮನೆಗೆ ನುಗ್ಗಿ ಮಹಿಳೆ ಹಲ್ಲೆಗೆ ಯತ್ನ: ಆಟೋ ಚಾಲಕನಿಗೆ ಗೂಸಾ ನೀಡಿದ ಸಾರ್ವಜನಿಕರು

0
image_editor_output_image-1799682830-1656682378272

ವಿಟ್ಲ: ಉದ್ಯಮಿಯೊಬ್ಬರ ಮನೆಗೆ ನುಗ್ಗಿ ಕುಡುಕನೋರ್ವ ಮಹಿಳೆ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ವಿಟ್ಲ ಚಂದಳಿಕೆಯಲ್ಲಿ ನಡೆದಿದೆ.

ಚಂದಳಿಕೆ ನಿವಾಸಿ ಉದ್ಯಮಿ ನವೀನ್ ಶೆಟ್ಟಿ ಎಂಬವರ ಮನೆಗೆ ಚಂದಳಿಕೆ ಸಮೀಪದ ರಿಕ್ಷಾ ಡ್ರೈವರ್ ಗಣೇಶ್ ಶೆಟ್ಟಿ ಎಂಬಾತ ಕುಡಿದ ಮತ್ತಿನಲ್ಲಿ ಕಳೆದ ರಾತ್ರಿ ನವೀನ್ ಅವರ ಮನೆಯ ಮುಂದೆ ನಿಂತು ಬೊಬ್ಬೆಹಾಕುತ್ತಿದ್ದು, ನಿನ್ನೆ ಸುಮಾರು ಸಂಜೆ 4.50ರ ಹೊತ್ತಿಗೆ ನವೀನ್ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಇದ್ದ ವೇಳೆ ಈ ಕುಡುಕ ಏಕಾಏಕಿ ಮನೆಯೊಳಗೆ ನುಗ್ಗಿ, ಹೆಂಡತಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ.

ಈ ವೇಳೆ ಗಾಬರಿಗೊಂಡ ಮಹಿಳೆ ಬೊಬ್ಬೆ ಹೊಡೆದು ಮನೆಯ ರೂಂ ಗೆ ಮಕ್ಕಳೊಂದಿಗೆ ಓಡಿ ಹೋಗಿ, ತನ್ನ ಗಂಡನಿಗೆ ಫೋನ್ ಮುಖಾಂತರ ವಿಷಯ ತಿಳಿಸಿದ್ದಾರೆ. ಈ ವೇಳೆ ನವೀನ್ ತನ್ನ ಆಸುಪಾಸಿನವರಿಗೆ ಫೋನ್ ಮುಖಾಂತರ ವಿಚಾರ ತಿಳಿಸಿದ್ದಾರೆ. ನೆರೆಹೊರೆಯವರು ಈತನ ಬಳಿ ಧಾವಿಸುವುದನ್ನು ಕಂಡ ಈತ ನವೀನ್ ಅವರಿಗೆ ಜೀವ ಬೆರಿಕೆ ಹಾಕಿ ಹೊರಟು ಹೋಗುತ್ತಿದ್ದ ವೇಳೆ ಸಾರ್ವಜನಿಕರು ಈತನನ್ನು ವಶಕ್ಕೆ ಪಡೆದುಕೊಂಡು ಹಿಗ್ಗಾಮುಗ್ಗಾ ಗೂಸಾ ನೀಡಿದ್ದಾರೆ. ಈ ಬಗ್ಗೆ ಆರೋಪಿ ಗಣೇಶ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!