August 25, 2026

ಸುರತ್ಕಲ್: ಮದ್ರಸದಿಂದ ಹಿಂತಿರುಗುತ್ತಿದ್ದ ಬಾಲಕನಿಗೆ ಹಲ್ಲೆ ಅರೋಪ: ಬಾಲಕನಿಂದ ಕಟ್ಟು ಕಥೆ, ಪೊಲೀಸ್ ತನಿಖೆಯ ವೇಳೆ ಸಾಬೀತು

0
image_editor_output_image-6254657-1656653551856.jpg

ಸುರತ್ಕಲ್: ಶೈಕ್ಷಣಿಕ ಕಲಿಕೆಯಲ್ಲಿ ಹಿಂದಿದ್ದ ಬಾಲಕನೊಬ್ಬ, ಮದರಸದಿಂದ ಹಿಂತಿರುಗುವ ವೇಳೆ ತನ್ನ ಮೇಲೆ ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ್ದರು ಎಂದು ಮಾಡಿರುವ ಆರೋಪ, ಸತ್ಯಕ್ಕೆ ದೂರವಾದದ್ದು ಎಂದು ಪೊಲೀಸ್ ತನಿಖೆ ವೇಳೆ ಸಾಬೀತಾಗಿದೆ.

ಕಾಟಿಪಳ್ಳ ನಿವಾಸಿಯೋರ್ವರ ಪುತ್ರ, 6ನೇ ತರಗತಿ ಬಾಲಕರಂದು ಸಂಜೆ ಮದ್ರಸದ ಪಾಠ ಮುಗಿಸಿ ಮನೆಗೆ ಹೋಗುವ ಸಂದರ್ಭ ಹಲ್ಲೆ ನಡೆದಿದೆ ಎಂದು ಅಪ್ರಾಪ್ತ ಹುಡುಗ ಹಾಗೂ ಆತನ ಕುಟುಂಬಸ್ಥರು ದೂರು ನೀಡಿದ್ದರು.

ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಆದರೆ, ಬಾಲಕ ಪೆನ್ನು ಬಳಸಿ ಶರ್ಟ್ ಹರಿದು ಹಾಕಿದ್ದು, ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ತನಿಖೆ ವೇಳೆ ಸಾಬೀತಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!