October 9, 2026

ಪುತ್ತೂರು: ಈದ್ ಮೀಲಾದ್ ಸಂದರ್ಭ ವಾಹನಕ್ಕೆ ಸ್ಟಿಕ್ಕರ್ ಅಂಟಿಸಿ ಸಂಚಾರ ನಿಯಮ ಉಲ್ಲಂಘನೆ: ವಾಹನಗಳಿಗೆ ದಂಡ ವಿಧಿಸಿದ ಪೊಲೀಸರು

0
image_editor_output_image1130473009-1787646029410

ಪುತ್ತೂರು: ವಾಹನದ ಚಾಲನೆಗೆ ಅಡ್ಡಿಯಾಗುವಂತೆ ಗ್ಲಾಸ್ ಗಳಿಗೆ ಸ್ಟಿಕ್ಕರ್ ಅಳವಡಿಸಿ, ವಾಹನದ ನೋಂದಣಿ ಸಂಖ್ಯೆ ಮರೆಮಾಚುವಂತೆ ಸ್ಟಿಕ್ಕರ್ ಅಳವಡಿಸುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳಿಗೆ ಪುತ್ತೂರು ಸಂಚಾರ ಠಾಣಾ ಪೊಲೀಸರು ದಂಡ ವಿಧಿಸಿರುತ್ತಾರೆ.

ಸಾರ್ವಜನಿಕರು ಯಾವುದೇ ಉತ್ಸವ, ಹಬ್ಬ ಹರಿದಿನಗಳು ಹಾಗೂ ಯಾವುದೇ ಕಾರ್ಯಕ್ರಮದ ನೆಪದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

 

Leave a Reply

Your email address will not be published. Required fields are marked *

error: Content is protected !!