March 21, 2026

26 ಮಂದಿ ರೌಡಿಗಳ ಮನೆ ಮೇಲೆ 150ಕ್ಕೂ ಹೆಚ್ಚು ಪೊಲೀಸರಿಂದ ದಾಳಿ: ಮಾರಕಾಸ್ತ್ರಗಳ ವಶ

0
image_editor_output_image912684072-1656480209536.jpg

ಬೆಳಗಾವಿ: ರೌಡಿಸಂ ಮಾಡಿ ಜನರಲ್ಲಿ ಆತಂಕ ಹುಟ್ಟಿಸುತ್ತಿದ್ದ 26 ಮಂದಿ ರೌಡಿಗಳ ಮನೆ ಮೇಲೆ 150ಕ್ಕೂ ಹೆಚ್ಚು ಪೊಲೀಸರು ಬುಧವಾರ ಧಾಳಿ ನಡೆಸಿ ಮಾರಕಾಸ್ತ್ರ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ.

ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಪೊಲೀಸರು ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಈ ಧಾಳಿ ನಡೆಸುತ್ತಿದ್ದರು. ರುಕ್ಮೀಣಿ ನಗರದ ಶ್ರೀಧರ ಸತ್ಯಪ್ಪ ತಲವಾರ(29), ಮಹಾಧಚಾರ ರೋಡ್ ನ ವಿನಯ ಶಂಕರ ಪ್ರಧಾನ(45) ಹಾಗೂ ಖಂಜರ ಗಲ್ಲಿಯ ಅಲ್ತಾಫ ಸುಬೇದಾರ((36) ಸೇರಿದಂತೆ 26 ಮಂದಿ ರೌಡಿಗಳ ಮನೆ ಮೇಲೆ ದಾಳಿ ನಡೆಯಿತು.

ಈ ವೇಳೆ ಮೂವರು ರೌಡಿಗಳ ಮನೆಯಲ್ಲಿ ತಲವಾರು, ಚಾಕು, ಜಂಬೆ ಮತ್ತಿತರ ಮಾರಕಾಸ್ತ್ರಗಳು ಪೊಲೀಸರಿಗೆ ಸಿಕ್ಕಿದ್ದು, ಅವನ್ನು ವಶಪಡಿಸಿಕೊಳ್ಳಲಾಗಿದೆ.

ಇವರೆಲ್ಲರೂ ನಗರದಲ್ಲಿ ರೌಡಿಸಂ ಮಾಡಿ ಮಾರಕಾಸ್ತ್ರಗಳನ್ನು ತೋರಿಸಿ ಜನರಲ್ಲಿ ಆತಂಕ ಹುಟ್ಟಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!