August 25, 2026

ಸುಳ್ಯ: ತೆರವುಗೊಳಿಸಿರುವ ಪ್ರಯಾಣಿಕರ ತಂಗುದಾಣವನ್ನು ಪುನರ್ ನಿರ್ಮಿಸಿ ಕೊಡುವಂತೆ ತಹಶೀಲ್ದಾರರಿಗೆ ಮನವಿ

0
IMG-20220627-WA0047.jpg

ಸುಳ್ಯ: ಶಾಂತಿನಗರ ತಿರುವು ಬಳಿ ರಸ್ತೆ ಅಗಲೀಕರಣ ಗೊಳಿಸುವ ಸಂದರ್ಭ ಸ್ಥಳದಲ್ಲಿದ್ದ ಪ್ರಯಾಣಿಕರ ತಂಗುದಾಣವನ್ನು ತೆರವುಗೊಳಿಸಲಾಗಿತ್ತು.‌ಇದರಿಂದ ಶಾಂತಿನಗರ ಹಾಗೂ ಬೆಟ್ಟಂಪಾಡಿ ಪರಿಸರದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಟೋರಿಕ್ಷಾ ಮುಂತಾದ ವಾಹನಗಳಿಗೆ ಕಾಯುವ ಸಂದರ್ಭ ನಿಲ್ಲಲು ಸಮಸ್ಯೆ ಎದುರಾಗುತ್ತಿದೆ.

ಅಲ್ಲದೆ ಮಳೆಗಾಲ ಆರಂಭವಾಗಿದ್ದು ವಿದ್ಯಾರ್ಥಿಗಳಿಗೆ ವಾಹನಕ್ಕಾಗಿ ಕಾಯುವ ಸಂದರ್ಭ ತಂಗುದಾಣ ವಿಲ್ಲದೆ ತುಂಬಾ ಸಮಸ್ಯೆ ಎದುರಾಗಿದೆ. ಈ ಭಾಗದಲ್ಲಿ ವಾಹನ ದಟ್ಟಣೆ ಜಾಸ್ತಿಯಾಗಿದ್ದು ರಸ್ತೆ ಬದಿಗಳಲ್ಲಿ ನಿಲ್ಲಲು ಸಾರ್ವಜನಿಕರು ಆತಂಕ ಪಡುವಂತಾಗಿದೆ.
ಆದ್ದರಿಂದ ತೆರವುಗೊಳಿಸಿರುವ ಪ್ರಯಾಣಿಕರ ತಂಗುದಾಣ ವನ್ನು ಪುನರ್ ನಿರ್ಮಿಸಿಕೊಡುವಂತೆ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಮೂಲಕ ಸಂಸ್ಥೆಯ ಅಧ್ಯಕ್ಷ ಡಾlಆರ್ ಬಿ ಬಶೀರ್ ತಹಶೀಲ್ದಾರ್ ಕು. ಅನಿತಾಲಕ್ಷ್ಮಿ ಅವರಿಗೆ ಇಂದು ಮನವಿಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!