March 20, 2026

ಕಾಸರಗೋಡು: ಹೊಳೆಯಲ್ಲಿ ದೋಣಿ ಮುಳುಗಿ ಒಬ್ಬ ಮೃತ್ಯು: ಇಬ್ಬರು ಅಪಾಯದಿಂದ ಪಾರು

0
image_editor_output_image-1469296475-1656250039502

ಕಾಸರಗೋಡು, ಚೆರ್ವತ್ತೂರು ಅಚ್ಚಾಂತುರ್ತಿ ಹೊಳೆಯಲ್ಲಿ ನಾಡದೋಣಿ ಮಗುಚಿ ಓರ್ವ ಮೃತಪಟ್ಟ ಘಟನೆ ಆದಿತ್ಯವಾರ ಬೆಳಿಗ್ಗೆ ನಡೆದಿದೆ.

ಇಬ್ಬರು ಈಜಿ ದಡ ಸೇರಿದ್ದಾರೆ. ಸೂರಜ್(28) ಮೃತಪಟ್ಟವರು. ಬೆಳಿಗ್ಗೆ ಇಬ್ಬರು ಸ್ನೇಹಿತರ ಜೊತೆ ಹೊಳೆಗೆ ಮೀನು ಹಿಡಿಯಲು ತೆರಳಿದ್ದು, ಈ ಸಂದರ್ಭದಲ್ಲಿ ಘಟನೆ ನಡೆದಿದೆ.

ನೀರುಪಾಲಾಗಿದ್ದ ಸೂರಜ್ ಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪರಿಸರವಾಸಿಗಳು ಶೋಧ ನಡೆಸಿದ್ದು, ಮಧ್ಯಾಹ್ನದ ವೇಳೆ ಮೃತದೇಹವನ್ನು ಮೇಲಕ್ಕೆತ್ತಲಾಯಿತು.

Leave a Reply

Your email address will not be published. Required fields are marked *

error: Content is protected !!