May 16, 2026

ಕಾಸರಗೋಡು: ಚಲಿಸುತ್ತಿದ್ದ ರೈಲಿಗೆ ನವಿಲು ಢಿಕ್ಕಿ ಹೊಡೆದು ಚಾಲಕನಿಗೆ ಗಾಯ

0
n3988493161656253196160529a31ecba332b26d871d180dec38ddd546acff7b5c6a9c7d099efe13762df0e.jpg

ಕಾಸರಗೋಡು: ಚಲಿಸುತ್ತಿದ್ದ ರೈಲಿಗೆ ನವಿಲು ಢಿಕ್ಕಿಯಾಗಿ ಇಂಜಿನ್‌ನ ಗಾಜು ಒಡೆದು ಚಾಲಕ ಗಾಯಗೊಂಡಿರುವ ಘಟನೆ ಕಾಸರಗೋಡು ಸಮೀಪದ ಕುಂಬ್ಳೆ ಎಂಬಲ್ಲಿ ಭಾನುವಾರ ನಡೆದಿದೆ.

ಮಂಗಳೂರಿನಿಂದ ಕೊಯಂಬತೂರು ಕಡೆ ಹೋಗುತ್ತಿದ್ದ ಕೊಯಂಬತೂರ್ ‘ಎಕ್ಸ್ ಪ್ರೆಸ್ ಸ್ಪೆಷಲ್ ಟ್ರೈನ್‌’ಗೆ ಕುಂಬ್ಳೆ ಕಾಸರಗೋಡು ನಡುವೆ ನವಿಲು ಢಿಕ್ಕಿಯಾಗಿ ರೈಲಿನ ಗ್ಲಾಸ್ ಒಡೆದು ರೈಲು ಚಾಲಕ ಶಾಜಿ ಎಂಬವರಿಗೆ ಸಣ್ಣ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಒಂದು ಗಂಟೆ ಕಾಲ ರೈಲು ಕಾಸರಗೋಡು ನಿಲ್ದಾಣದಲ್ಲಿ ನಿಂತು ಬಳಿಕ ಬೇರೆ ಇಂಜಿನ್ ಜೋಡಿಸಿ ಪ್ರಯಾಣ ಮುಂದುವರಿಸಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!