March 20, 2026

ಉಡುಪಿ: ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ಮೃತ್ಯು

0
n39766826216559056329299e1b208e060cf4c7f8b8fd25dca2756d2ac05256db8e85563e5febcff67f4ec6.jpg

ಉಡುಪಿ: ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.

ಗಣಪತಿ ಆಚಾರ್ಯ ಎಂಬವರು ಮೃತಪಟ್ಟ ವ್ಯಕ್ತಿ. ಉಡುಪಿ ಜಿಲ್ಲೆಯ ಅಂಬಾಗಿಲು ಪುತ್ತೂರು ಬಳಿ ಘಟನೆ ಸಂಭವಿಸಿದೆ. ಮನೆಯ ಬಳಿ ನಡೆಯುತಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇವರು ನೃತ್ಯ ಮಾಡುತಿದ್ದ ಸಂಧರ್ಭದಲ್ಲಿ ಯೇ ಕುಸಿದು ಬಿದ್ದಿದ್ದರು. ತಕ್ಷಣವೇ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುಲಾಯಿತಾದರೂ ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಗಣಪತಿ ಆಚಾರ್ಯ ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಗಣಪತಿ ಆಚಾರ್ಯ ಅವರು ಚಿನ್ನದ ಆಭರಣ ತಯಾರಿಕೆಯ ಜೊತೆಗೆ ಪಿಗ್ಮಿ ಸಂಗ್ರಾಹಕರಾಗಿಯೂ ಕಾರ್ಯನಿರ್ವಹಿಸುತಿದ್ದರು

Leave a Reply

Your email address will not be published. Required fields are marked *

You may have missed

error: Content is protected !!