November 22, 2024

ವಿಟ್ಲ: ಸಾಲೆತ್ತೂರಿನಲ್ಲಿ ಯುವಕರ ನಡುವೆ ಮಾರಾಮಾರಿ ಪ್ರಕರಣ: ನಾಲ್ವರು ಆರೋಪಿಗಳು ಪೊಲೀಸ್ ವಶಕ್ಕೆ

0

ವಿಟ್ಲ: ವೈಯಕ್ತಿಕ ವಿಚಾರದಲ್ಲಿ ಸಂಘಟನೆಗಳ ಎರಡು ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದಿತ್ತು. ಈ ಸಂಬಂಧ ಓರ್ವನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಮತ್ತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

ಈ ಬಗ್ಗೆ ಇತ್ತಂಡಗಳೂ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಶಶಿಕುಮಾರ್ ಎಂಬಾತನನ್ನು ಇನ್ಸ್ ಪೆಕ್ಟರ್ ನಾಗರಾಜ್ ಎಚ್ ನೇತೃತ್ವದ ತಂಡ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ 4 ಕ್ಕೆ ಏರಿಕೆಯಾಗಿದೆ. ಬಂಧಿತ ಆರೋಪಿಗಳನ್ನು ವಿನೀತ್‌, ಗಣೇಶ್‌, ದಿನೇಶ್‌ ಎನ್ನಲಾಗಿದೆ. ಪ್ರಶಾಂತ್‌ ಅಲಿಯಾಸ್‌ ಪಚ್ಚು ಅವರ ಗುಂಪಿನಲ್ಲಿ ಇವರು ಇದ್ದರು ಎನ್ನಲಾಗಿದೆ.

ಪ್ರಶಾಂತ್‌ ಗೆ ಹಲ್ಲೆ ನಡೆಸಿದ ಪ್ರಮುಖ ಆರೋಪಿ ಚಂದ್ರಹಾಸ ಕನ್ಯಾನ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿಯಿದೆ. ಚಂದ್ರಹಾಸ ಕನ್ಯಾನ ಮತ್ತು ಸಹಚರರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಶಾಂತ್ ಸ್ಥಿತಿ ಚಿಂತಾಜನಕವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಅಧೀನದಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಪ್ರಶಾಂತ್ ಈ ಹಿಂದೆ ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಅಬ್ದುಲ್‌ ಜಲೀಲ್‌ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಅಂತೆಯೇ ಪಿಂಕಿ ನವಾಜ್‌ನನ್ನು ಕಾಟಿಪಳ್ಳದ ೨ನೇ ಬ್ಲಾಕ್‌ನಲ್ಲಿರುವ ಟಿಕ್‌ಟಾಕ್ ಗಾರ್ಡನ್ ಬಳಿ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಂಡ ಮಾರಕಾಸ್ತ್ರದಿಂದ ಅಟ್ಟಾಡಿಸಿ ಕೊಲೆಗೆ ಯತ್ನಿಸಿದ್ದರು. ಈ ತಂಡದಲ್ಲಿ ಪ್ರಶಾಂತ್ ಕೂಡ ಭಾಗಿಯಾಗಿದ್ದ. ಮತ್ತು ಪೊಲೀಸರು ಈತನನ್ನು ಬಂಧಿಸಿದ್ದರು.

Leave a Reply

Your email address will not be published. Required fields are marked *

error: Content is protected !!