February 4, 2026

ಕೊಡಗು: ಕಾಫಿ ನಾಡಲ್ಲಿ ಕಾರ್ಮಿಕರಿಗಾಗಿ SDTU ಅಸ್ಥಿತ್ವಕ್ಕೆ

0
IMG-20220620-WA0011.jpg

ಕೊಡಗು: ಕಾರ್ಮಿಕರ ಹಕ್ಕುಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ಕಾರ್ಯಾಚರಿಸುವ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (SDTU) ಕೊಡಗು ಜಿಲ್ಲಾ ಘಟಕ ಅಸ್ಥಿತ್ವಕ್ಕೆ ಬಂದಿದೆ.

ಅಧ್ಯಕ್ಷರಾಗಿ ಶೆರೀಫ್ ಅಣ್ಣಾ, ಉಪಾಧ್ಯಕ್ಷರಾಗಿ ರಝಾಕ್ ಅಝಾದ್ ನಗರ, ಪ್ರಧಾನ ಕಾರ್ಯದರ್ಶಿಯಾಗಿ ರವೂಫ್ ಪಾಲಿಬೆಟ್ಟ, ಕಾರ್ಯದರ್ಶಿ ಹಸೀನಾ, ಕೋಶಧಿಕಾರಿಯಾಗಿ ಮೊಹಮ್ಮದ್ ಪೋನಪ್ಪ ಸಂತೆ, ಸದಸ್ಯರಾಗಿ ಫರೀದ್, ಆರ್ಷದ್, ಅಶ್ರಫ್, ಜಲೀಲ್, ಅಝೀಝ್, ಝಕರಿಯ ಆಯ್ಕೆಯಾದರು.

ಕಾಫಿ ಮತ್ತು ಕಾಳು ಮೆಣಸು ಕೊಡಗಿನಲ್ಲಿ ಹೆಚ್ಚು ಬೆಳೆಯುವ ಬೆಳೆಗಳಾಗಿವೆ ಹೆಚ್ಚಿನ ಸಂಖ್ಯೆಯಲ್ಲಿ ಹೊರರಾಜ್ಯದಿಂದ ಕಾರ್ಮಿಕರು ಇಲ್ಲಿನ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ತೋಟಗಳಲ್ಲಿ ದುಡಿಯುವ ಕಾರ್ಮಿಕರು ವಿವಿಧ ರೀತಿಯ ಜೀವ ಭಯವನ್ನು ಎದುರಿಸಿ ಬದುಕು ಸಾಗಿಸುವವರಾಗಿದ್ದಾರೆ. ಆನೆ, ಹುಲಿ ದಾಳಿಯಿಂದ, ಸೀಸನ್ ನಲ್ಲಿ ಕಾಳು ಮೆಣಸು ಕೊಯ್ಲು ಸಂದರ್ಭದಲ್ಲಿ ಕಬ್ಬಿಣದ ಏಣಿಯಿಂದ ವಿದ್ಯುತ್ ಅಪಘಾತವಾಗಿ ನಡೆಯುವ ಆಕಸ್ಮಿಕ ಸಾವು ಇತ್ಯಾದಿ ಜೀವ ಭಯದಿಂದ ಸಾವನ್ನೇ ಸವಾಲಾಗಿ ಸ್ವೀಕರಿಸಿ ಕಾಸು ಸಂಪಾದಿಸುವ ಭರದಲ್ಲಿ ತನ್ನ ಜೀವವನ್ನೇ ಕಾರ್ಮಿಕರು ಕಳೆದುಕೊಳ್ಳುತ್ತಿದ್ದಾರೆ.

ಈ ನಿಟ್ಟಿನಲ್ಲಿ ಕಾರ್ಮಿಕರನ್ನು ಸಂಘಟಿಸಿ ಅವರ ಕ್ಷೇಮಕ್ಕಾಗಿ ಮತ್ತು ಕಾರ್ಮಿಕರ ಕ್ಷೇಮಾಭಿವೃದ್ದಿಗಾಗಿ ಪೂರಕವಾಗಿರುವ ಕಾರ್ಮಿಕ ಕಲ್ಯಾಣ ಮಂಡಳಿಯ ಯೋಜನೆಗಳನ್ನು ಕಾರ್ಮಿಕರು ಸಮರ್ಪಕಗಾಗಿ ಸದ್ಭಳಕೆ ನಡೆಸಲು ಅದಕ್ಕೆ ತೊಡಕಾದ ಎಲ್ಲಾ ಸಮಸ್ಯೆಗಳನ್ನು ಹೋರಾಟದಿಂದ ನಿವಾರಿಸುವ ಪ್ರಯತ್ನ ಮತ್ತು ಕಾರ್ಮಿಕ ಹಕ್ಕುಗಳ ಬಗ್ಗೆ ಜಾಗೃತಿ ನಡೆಸಲು SDTU ಕೊಡಗಿನಲ್ಲಿ ಕಾರ್ಯಚರಿಸಲಿದೆ ಎಂದು SDTU ಕೊಡಗು ಜಿಲ್ಲಾಧ್ಯಕ್ಷ ಶರೀಫ್ ಅಣ್ಣಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!