February 3, 2026

ಹೊಸ ನೀತಿ ಇಷ್ಟಪಡದಿದ್ದರೆ ಸೇನೆಗೆ ಸೇರಬೇಡಿ: ವಿ.ಕೆ ಸಿಂಗ್

0
image_editor_output_image-1940178731-1655706814270.jpg

ನಾಗ್ಪುರ: ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ರೂಪಿಸಿರುವ ಹೊಸ ನೀತಿಯನ್ನು ಇಷ್ಟಪಡದಿದ್ದರೆ ಅವರು ಸೈನೆಯನ್ನು ಆರಿಸಿಕೊಳ್ಳಬಾರದು ಎಂದು ಕೇಂದ್ರ ಸಚಿವ ಮತ್ತು ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ ಸಿಂಗ್ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಭಾರತೀಯ ಸೇನೆಯು ಸೈನಿಕರನ್ನು ಬಲವಂತಪಡಿಸುವುದಿಲ್ಲ ಮತ್ತು ಸೇನೆಗೆ ಸೇರಬಯಸುವ ಆಕಾಂಕ್ಷಿಗಳು ತಮ್ಮ ಸ್ವಂತ ಇಚ್ಛೆಯಿಂದ ಸೇರಬೇಕು ಎಂದರು.

ಇನ್ನು ಯಾವುದೇ ಆಕಾಂಕ್ಷಿಗಳು ಸೇರಲು ಬಯಸಿದರೆ, ಅವರು ತಮ್ಮ ಇಚ್ಛೆಯಂತೆ ಸೇರಬಹುದು, ನಾವು ಸೈನಿಕರನ್ನು ಬಲವಂತಪಡಿಸುವುದಿಲ್ಲ. ಆದರೆ ನಿಮಗೆ ಈ ನೇಮಕಾತಿ ಯೋಜನೆ (‘ಅಗ್ನಿಪಥ್’) ಇಷ್ಟವಾಗದಿದ್ದರೆ ಬರಬೇಡಿ, ಯಾರು ನಿಮ್ಮನ್ನು ಬರಲು ಒತ್ತಾಯ ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!