February 3, 2026

ಮಂಗಳೂರು: ಜೀಪ್ ಪಲ್ಟಿ ಹೊಡೆದು ಯುವತಿ ಮೃತ್ಯು: ಮೂವರು ಗಂಭೀರ

0
image_editor_output_image1992496542-1655695636956

ಮಂಗಳೂರು: ಮುಂಡ್ಕೂರು ಸಂಕಲಕರಿಯಲ್ಲಿ ಚಲಿಸುತ್ತಿದ್ದ ಜೀಪ್ ಸ್ಕಿಡ್ ಆಗಿ ಪಲ್ಟಿಯಾಗಿದ್ದು, ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ ಮತ್ತು ಮೂವರು ಗಾಯಗೊಂಡ ಘಟನೆ ನಡೆದಿದೆ.

ಬೆಳ್ಮಣ್- ಸಂಕಲಕರಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಭಾಸ್ಕರ ಎಂಬುವವರು ವಾಹನ‌ ಚಲಾಯಿಸುತ್ತಿದ್ದು ತಿರುವಿನಲ್ಲಿ ಆಕಸ್ಮಿಕವಾಗಿ ಜೀಪ್ ಪಲ್ಟಿ ಆಗಿದೆ.ಘಟನೆಯ ವೇಳೆ ವಾಹನದಲ್ಲಿ ಚಾಲಕ ಸಹಿತ ಐದು ಜನರಿದ್ದು ಯುವತಿಯೊಬ್ಬಳು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

ಜಯರಾಮ ಎಂಬುವವರಿಗೆ ಸೇರಿದ ಜೀಪ್ ಅಪಘಾತಕ್ಕೊಳಪಟ್ಟಿದ್ದು ಇನ್ನುಳಿದ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಆದರೆ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Leave a Reply

Your email address will not be published. Required fields are marked *

error: Content is protected !!