ಸಾಲೆತ್ತೂರಿನಲ್ಲಿ ಬಜರಂಗದಳದ ಮುಖಂಡನಿಗೆ ಹಲ್ಲೆ: ಇತ್ತಂಡದ ವಿರುದ್ಧ ಪ್ರಕರಣ ದಾಖಲು: ಚಂದ್ರಹಾಸ್ ಕನ್ಯಾನ ವಿಟ್ಲ ಠಾಣೆಗೆ ನೀಡಿದ ದೂರಿನನಲ್ಲೇನಿದೆ?
ವಿಟ್ಲ: ವೈಯಕ್ತಿಕ ವಿಚಾರದಲ್ಲಿ ಸಂಘಟನೆಯ ಒಳಗೆ ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದು ಮಾರಕಾಯುದ್ಧ ದಾಳಿಗೆ ಇಬ್ಬರು ಗಾಯಗೊಂಡಿದ್ದಾರೆ.
ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕ ಚಂದ್ರಹಾಸ ಕನ್ಯಾನ ಹಾಗೂ ಸುರತ್ಕಲ್ ಕೃಷ್ಣಾಪುರ ನಿವಾಸಿ ಪ್ರಶಾಂತ್ ಎಂಬವರಿಗೆ ಗಾಯಗಳಾಗಿದೆ .
ಅಡ್ಯನಡ್ಕ ನಿವಾಸಿ ಗಿರೀಶ್, ಪ್ರಶಾಂತ್ ಸುರತ್ಕಲ್ ಸೇರಿ ಸುಮಾರು 12 ತಂಡ ಸಾಲೆತ್ತೂರಿನಲ್ಲಿ ಬಂದು ನಾಗೇಶ್ ಸಾಲೆತ್ತೂರು ಅವರಲ್ಲಿ ಚಂದ್ರಹಾಸ ಕನ್ಯಾನ ಜತೆಗೆ ಸೇರಬಾರದೆಂದು ಹೇಳಿದ್ದು, ಬಳಿಕ ಬೈಠಕ್ ಹೋಗುವ ನಿಟ್ಟಿನಲ್ಲಿ ಚಂದ್ರಹಾಸ ಕನ್ಯಾನ ನಾಗೇಶ್ ಸಾಲೆತ್ತೂರು ಅವರ ಮನೆಗೆ ಬರುತ್ತಿದ್ದ ಸಮಯ ಈ ದಾಳಿ ನಡೆದಿದೆ ಎನ್ನಲಾಗಿದೆ.
ಚಂದ್ರಹಾಸ ಕನ್ಯಾನ ಅವರ ತಲೆಗೆ ಏಟಾಗಿದ್ದು, ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಶಾಂತ್ ಸುರತ್ಕರ್ ಬೆನ್ನಿಗೆ ಏಟಾಗಿದ್ದು, ಮಂಗಳೂರು ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಂಡಗಳ ನಡುವಿನ ದ್ವೇಷ ಋಂದು ಹೇಳಲಾಗುತ್ತಿದೆಯಾದರೂ, ಹಣದ ವಿಚಾರದಲ್ಲಿ ಈ ದಾಳಿ ನಡೆದಿದೆ ಎಂಬ ಮಾಹಿತಿಯಿದೆ.
ಇದೀಗ ಘಟನೆ ಸಂಬಂಧ ಎರಡು ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದೆ. ಚಂದ್ರ ಹಾಸ ಕನ್ಯಾನ ದೂರು ದಾಖಲಿಸಿದ್ರೆ ಪ್ರಶಾಂತ್ ಸುರತ್ಕಲ್ ಪ್ರತಿದೂರು ದಾಖಲಿಸಿದ್ದಾರೆ.
ಚಂದ್ರಹಾಸ್ ಕನ್ಯಾನ ನೀಡಿದ ದೂರಿನಲ್ಲಿ ಈ ರೀತಿ ಇದೆ..
ಪ್ರಕರಣದ ಸಂಕ್ಷೀಪ್ತ ಸಾರಾಂಶವೇನೆಂದರೆ ಈ ದಿನ ದಿನಾಂಕ:19-06-2022 ರಂದು ಸಂಜೆ 5.30 ಗಂಟೆಯ ಸಮಯಕ್ಕೆ ಬಂಟ್ವಾಳ ತಾಲೂಕು ಸಾಲೆತ್ತೂರು-ಅಗರಿ ಎಂಬಲ್ಲಿ ಆರೋಪಿಗಳಾದ ಪ್ರಶಾಂತ, ತೇಜಸ್, ಗೀರಿಶ ,ಗಣೇಶ್, ಶರತ್, ಧನು, ಮುನ್ನಾ, ಚೇತನ, ವಿನಿತ, ದಿನೇಶ್,ಶಶಿಕುಮಾರ ಹಾಗೂ ಇತರ ಇಬ್ಬರು ಅಕ್ರಮಕೂಟ ಸೇರಿಕೊಂಡು ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದು ಪಿರ್ಯಾಧಿದಾರರನ್ನು ಉದ್ದೇಶಿಸಿ ಆಪಾದಿತ ಪ್ರಶಾಂತನು ತುಳು ಭಾಷೆಯಲ್ಲಿ “ಈ ಸಂಘಟನೆಡ್ ಭಾರಿ ರಾಪನಾ? ನಿನನ್ ಕೆರಂದೆ ಬುಡಾಯೇ ಎಂದು ಹೇಳಿ ಕೊಲೆ ಮಾಡುವ ಉದ್ದೇಶದಿಂದ ಆತನ ಕೈಯಲ್ಲಿದ್ದ ತಲವಾರಿನಿಂದ ಪಿರ್ಯಾಧಿಯ ತಲೆಯ ಭಾಗಕ್ಕೆ ಕಡಿದಿದ್ದು, ಆಗ ಆತನೊಂದಿಗಿದ್ದ ಇತರರು ತುಳು ಭಾಷೆಯಲ್ಲಿ “ಚಂದ್ರಹಾಸನ್ ಕೆರ್” ಎಂಬುದಾಗಿ ತುಳು ಬಾಷೆಯಲ್ಲಿ ಹೇಳಿದಾಗ ಆರೋಪಿ ತೇಜಸ್‌ನು ಪುನಃ ಆತನ ಕೈಯಲ್ಲಿದ್ದ ತಲವಾರಿನಿಂದ ಪಿರ್ಯಾಧಿಯ ತಲೆಯ ಭಾಗಕ್ಕೆ ಕಡೆದುದಲ್ಲದೇ ಗಿರೀಶನು ಆತನ ಕೈಯಲ್ಲಿದ್ದ ಚೂರಿಯಿಂದ ಚುಚ್ಚಿದನು, ಉಳಿದವರೆಲ್ಲರೂ ಸೇರಿಕೊಂಡು ಪಿರ್ಯಾಧಿದಾರರಿಗೆ ಕೈಯಿಂದ ಹಾಗೂ ಕಲ್ಲಿನಿಂದ ಹೊಡೆದಿರುತ್ತಾರೆ.
ಆ ಸಮಯಕ್ಕೆ ನಾಗೇಶನ ಮನೆಯವರು ಬೊಬ್ಬೆ ಹೊಡೆದು ಪೊಲೀಸ್‌ರಿಗೆ ಪೋನ್ ಮಾಡಿದಾಗ ಆರೋಪಿಗಳೆಲ್ಲರೂ ಪಿರ್ಯಾಧಿಯನ್ನುದ್ದೇಶಿಸಿ ಇದೇರೀತಿ ಸಂಘಟಣೆಯಲ್ಲಿ ಮೆರೆದರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಒಡ್ಡಿ ಆಪಾದಿತರುಗಳು ಬಂದಿದ್ದ ಕಾರು ನಂಬ್ರ ಕೆಎ-19-ಎಂಎಚ್-3379 ಹಾಗೂ ಮೋಟಾರು ಸೈಕಲ್‌ಗಳಲ್ಲಿ ಹೋಗಿರುತ್ತಾರೆ.
ಪಿರ್ಯಾಧಿದಾರರು ವಿಟ್ಲ ಪ್ರಖಂಡ ಭಜರಂಗದಳ ಸಂಚಾಲಕರಾಗಿ ಜವಾಬ್ದಾರಿಯನ್ನು ಹೊಂದಿ ಉತ್ತಮ ಕಾರ್ಯ ನಿರ್ವಹಿಸಿ ಏಳಿಗೆಯನ್ನು ಸಹಿಸದೇ ಇರುವುದೆ ಈ ಘಟನೆಗೆ ಕಾರಣವಾಗಿರುತ್ತದೆ ಅಲ್ಲದೇ ಹಲ್ಲೆಯಿಂದ ಗಾಯಗೊಂಡ ಪಿರ್ಯಾಧಿದಾರರು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂದು ಚಂದ್ರಹಾಸ್ ಕನ್ಯಾನ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರು ಕೃಷ್ಣಪುರ ನಿವಾಸಿ ಪ್ರಶಾಂತ್ ನೀಡಿದ ದೂರಿನಂತೆ ಚಂದ್ರಹಾಸ, ನಾಗೇಶ್, ದೇವದಾಸ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜೂ.19 ರಂದು ಸಂಜೆ ಸಾಲೆತ್ತೂರು-ಅಗರಿ ಎಂಬಲ್ಲಿ ಪ್ರಶಾಂತ್, ತೇಜಸ್ ರವರ ತಂಡ ಚಂದ್ರಹಾಸ ರವರ ಮೇಲೆ ಹಲ್ಲೆ ನಡೆಸಿದ್ದು, ‘ಈ ಸಂಘಟನೆಡ್ ಭಾರಿ ರಾಪನಾ..??’ ನಿನನ್ ಕೆರಂದೆ ಬುಡಾಯೇ ಎಂದೆಲ್ಲಾ ಹೇಳಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಸಂಘಟನೆಯ ಜವಾಬ್ದಾರಿಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವ ಏಳಿಗೆಯನ್ನು ಸಹಿಸದೇ ಈ ರೀತಿಯಾಗಿ ಕೃತ್ಯವೆಸಗಿದ್ದಾರೆ ಎಂದು ಚಂದ್ರಹಾಸ ರವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 101/2022 ಕಲಂ: 143, 147,148,323,324,307,506 ಜೊತೆಗೆ 149 ಬಾಧಂಸಂ ರಂತೆ ಪ್ರಕರಣ ದಾಖಲಾಗಿದೆ.
ಪ್ರಶಾಂತ್ ರವರು ಹುಡುಗರ ಮಧ್ಯೆ ಇದ್ದ ವೈಮನಸ್ಸಿನ ಬಗ್ಗೆ ಮಾತನಾಡಲು ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ನಾಗೇಶ್ ರವರ ಮನೆಯ ಬಳಿ ಹೋಗಿ ನಾಗೇಶ್, ಚಂದ್ರಹಾಸ, ದೇವದಾಸರವರೊಂದಿಗೆ ಮಾತನಾಡುತ್ತಿರುವಾಗ ಮಾತಿಗೆ ಮಾತು ಬೆಳೆದು ಪ್ರಶಾಂತ್ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ, ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಯಾವುದೋ ದ್ವೇಷದಿಂದ ಈ ಕೃತ್ಯವೆಸಗಿದ್ದಾರೆ ಎಂದು ಪ್ರಶಾಂತ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 102/2022 ಕಲಂ: 143, 144, 147, 148, 323,307,506 ಜೊತೆಗೆ 149 ಬಾಧಂಸಂ ರಂತೆ ಪ್ರಕರಣ ದಾಖಲಾಗಿದೆ..




