February 3, 2026

‘ಅಗ್ನಿಪಥ ಯೋಜನೆ’ ವಿರುದ್ಧ ತೀವ್ರಗೊಂಡ ಪ್ರತಿಭಟನೆ:
ಬಿಹಾರದಲ್ಲಿ ಮತ್ತೆ ಎರಡು ರೈಲುಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

0
image_editor_output_image929445639-1655455310133.jpg

ನವದೆಹಲಿ: ಸೈನಿಕರ ನೇಮಕಾತಿಯ ಹೊಸ ನೀತಿ ‘ಅಗ್ನಿಪಥ ಯೋಜನೆ’ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದ್ದು, ಕಿಡಿಗೇಡಿಗಳು ಬಿಹಾರದಲ್ಲಿ ಎರಡು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ.

ಹಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ‘ಜಮ್ಮು ತವಿ ಎಕ್ಸ್‌ಪ್ರೆಸ್‌’ ರೈಲಿಗೆ, ಹಾಜಿಪುರ್‌–ಬರೌನಿ ಮಾರ್ಗದ ಮೊಹಿಯುದ್ದೀನ್‌ನಗರ ನಿಲ್ದಾಣದ ಬಳಿ ಬೆಂಕಿ ಹಚ್ಚಲಾಗಿದೆ.

ಬಿಹಾರದಲ್ಲಿಯೇ ಲಖಿಸರಾಯ್‌ ಜಂಕ್ಷನ್‌ನಲ್ಲಿ ಮತ್ತೊಂದು ರೈಲಿಗೆ ಬೆಂಕಿ ಹಾಕಿದ್ದಾರೆ. ‘ಕಿಡಿಗೇಡಿಗಳು ವಿಡಿಯೊ ಮಾಡದಂತೆ ನನ್ನನ್ನು ತಡೆದು, ಫೋನ್‌ ಕಸಿದುಕೊಂಡರು. ಬೆಂಕಿಯಿಂದಾಗಿ ನಾಲ್ಕರಿಂದ ಐದು ಬೋಗಿಗಳಿಗೆ ಹಾನಿಯಾಗಿದೆ’ ಎಂದು ಪೊಲೀಸ್‌ ಸಿಬ್ಬಂದಿ ತಿಳಿಸಿರುವುದಾಗಿ ಎಎನ್‌ಐ ಟ್ವೀಟ್‌ ಮಾಡಿದೆ.

Leave a Reply

Your email address will not be published. Required fields are marked *

error: Content is protected !!