March 26, 2026

ಈ.ಡಿ. ದುರ್ಬಳಕೆ ವಿರೋಧಿಸಿ ಅತ್ತಾವರದ ಐ.ಟಿ. ಕಚೇರಿವರೆಗೆ ಕಾಂಗ್ರೆಸ್ ಪಾದಯಾತ್ರೆ:
ರಮಾನಾಥ ರೈ ಸಹಿತ 100ಕ್ಕೂ ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

0
image_editor_output_image1709699599-1655455062649.jpg

ಮಂಗಳೂರು: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ.ಡಿ.ಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ ಮತ್ತು ಪ್ರತಿಭಟನೆಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳೂರಿನ ಫಳ್ನೀರ್ ಎಸ್.ಎಲ್ ಮಥಾಯಿಸ್ ಪಾರ್ಕ್ ನಿಂದ ಅತ್ತಾವರದ ಐ.ಟಿ. ಕಚೇರಿ ವರೆಗೆ ಪಾದಯಾತ್ರೆ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಪ್ರತಿಭಟನಾಕಾರರನ್ನು ಅತ್ತಾವರ ಕಟ್ಟೆಯ ಬಳಿ ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ಕಾಂಗ್ರೆಸ್ ಸಂಸದರು ಮತ್ತು ಎಐಸಿಸಿ ನಾಯಕರು ಪ್ರತಿಭಟನೆ ಮಾಡುವುದನ್ನು ಹತ್ತಿಕ್ಕಲು ಪ್ರತಿಭಟನೆಗೆ ಅವಕಾಶ ನೀಡದೆ ಎಐಸಿಸಿ ಕಚೇರಿ ಆವರಣದಲ್ಲಿಯೇ ಬಂಧಿಸುವ ಮೂಲಕ ಕೇಂದ್ರ ಸರ್ಕಾರ ಮತ್ತು ಪೊಲೀಸರು ಸಂವಿಧಾನದತ್ತ ಹಕ್ಕನ್ನು ಮೊಟುಕಗೊಳಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನು ಅತ್ತಾವರ ಕಟ್ಟೆಯ ಬಳಿ ಪೊಲೀಸರು (ಬ್ಯಾರಿಕೇಡ್ )ತಡೆ ಬೇಲಿಯೊಂದಿಗೆ ತಡೆದರು. ಈ ಸಂದರ್ಭ ಕೆಲವರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಡೆ ಬೇಲಿ ದಾಟಲು ಯತ್ನಿಸಿದರು. ಇನ್ನೂ ಕೆಲವರು ಸ್ಥಳದಲ್ಲಿ ಧರಣಿ ನಡೆಸಲು ಮುಂದಾದರು. ಈ ವೇಳೆ ಪಕ್ಷದ ಮುಖಂಡರು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

Leave a Reply

Your email address will not be published. Required fields are marked *

error: Content is protected !!