February 3, 2026

ತೋಟದ ಕೃಷಿ ಹೊಂಡಕ್ಕೆ ಮೂರು ಮಕ್ಕಳನ್ನು ತಳ್ಳಿ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

0
image_editor_output_image-660417150-1655358915199.jpg

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ತಾಂಡಾದ ತೋಟವೊಂದರಲ್ಲಿ ಕೃಷಿ ಹೊಂಡಕ್ಕೆ ತನ್ನ ಮೂರು ಮಕ್ಕಳನ್ನು ತಳ್ಳಿ ನಂತರ ತಾನೂ ಹಾರಿ ತಾಯಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. 

27 ವರ್ಷದ ಅನಿತಾ ಪಿಂಟು ಜಾಧವ್, ತನ್ನ ಮಕ್ಕಳಾದ 6 ವರ್ಷದ ಪ್ರವೀಣ, 4 ವರ್ಷದ ಸುದೀಪ ಮತ್ತು 2 ವರ್ಷದ ಮಮದಿಕಾಳನ್ನು ಕೃಷಿ ಹೊಂಡಕ್ಕೆ ಎಸೆದು ನಂತರ ಅನಿತಾ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನಾಲ್ಕು ಜನರ ಮೃತದೇಹವನ್ನು ಹೊರತೆಗೆದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!