March 26, 2026

ನಿಂತಿದ್ದ ಹಾಲಿನ ಟ್ಯಾಂಕರ್ ಗೆ ಬೈಕ್ ಢಿಕ್ಕಿ: ಮೈಸೂರಿನ ಯುವಕ ಸ್ಥಳದಲ್ಲೇ ಸಾವು

0
image_editor_output_image-1569655937-1655286646683.jpg

ಕುಣಿಗಲ್ : ನಿಂತಿದ್ದ ಹಾಲಿನ ಟ್ಯಾಂಕರ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ಚಾಕೇನಹಳ್ಳಿ ಬಳಿ ಬುಧವಾರ ಸಂಭವಿಸಿದೆ.

ಮೈಸೂರಿನ ನವೀನ್ ಕುಮಾರ್( 28) ಮೃತ ಯುವಕ. ಕುಣಿಗಲ್ ಪಟ್ಟಣದ ಸಂಬಂಧಿಕರ ಮನೆಗೆ ಬಂದಿದ್ದ ಎನ್ನಲಾಗಿದ್ದು, ಕೆಲಸದ ನಿಮಿತ್ತ ಎಡಿಯೂರು ಕಡೆಗೆ ಹೊಗುತ್ತಿರಬೇಕಾದರೆ, ಚಾಕೇನಹಳ್ಳಿ ಸಮೀಪ ನಿಂತಿದ್ದ ಟ್ಯಾಂಕರ್ ಗೆ ಢಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಸ್ಥಳಕ್ಕೆ ಅಮೃತ್ತೂರು ಠಾಣೆಯ ವೃತ್ತ ನಿರೀಕ್ಷಕ ಅರುಣ್ ಸಾಲುಂಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!