February 4, 2026

ಕಾಸರಗೋಡು: ಗುಂಡೇಟು ತಗುಲಿ ಸಿಪಿಐ ಮುಖಂಡ ಮೃತ್ಯು

0
image_editor_output_image2096993389-1655285570630.jpg

ಕಾಸರಗೋಡು: ಗುಂಡೇಟು ತಗುಲಿ ಸಿಪಿಐ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪೊಯಿನಾಚಿ ಕರಿಚ್ಚೇರಿಯಲ್ಲಿ ನಡೆದಿದೆ.

ಕರಿಚ್ಚೇರಿ ಯ ಮಾಧವನ್ (65) ಮೃತಪಟ್ಟವರು. ಹಲಸು ಕೊಯ್ಯಲು ಹಿತ್ತಿಲಿಗೆ ತೆರಳಿದ್ದ ಮಾಧವನ್ ರವರು ನೆಲದಲ್ಲಿಟ್ಟಿದ್ದ ಕೋವಿಯನ್ನು ಮೆಟ್ಟಿದಾಗ ಗುಂಡು ಕಾಲಿಗೆ ತಗಲಿದೆ.

ಕಾಡುಹಂದಿಗೆ ಗುರಿ ಇಟ್ಟು ಈ ಕೋವಿಯನ್ನು ಪರಿಸರವಾಸಿಯೊಬ್ಬರು ಹಿತ್ತಿಲಿನಲ್ಲಿ ತಂದಿಟ್ಟಿದ್ದರು ಎನ್ನಲಾಗಿದೆ. ಘಟನೆ ನಡೆದ ಗಂಟೆಗಳ ಬಳಿಕ ಇದು ಮನೆಯವರ ಗಮನಕ್ಕೆ ಬಂದಿದೆ .

ಕೂಡಲೇ ಕಾಸರಗೋಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ . ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!