ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8ನೇ ಬಾರಿ ಗೆಲುವು ಸಾಧಿಸಿದ ಬಸವರಾಜ ಹೊರಟ್ಟಿ
ಬೆಳಗಾವಿ: ‘ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರಿಗೆ ಕಾಲಕಾಲಕ್ಕೆ ಎದುರಾಗುವ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡುತ್ತೇನೆ’ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8ನೇ ಬಾರಿ ಗೆಲುವು ಸಾಧಿಸಿದ ಬಸವರಾಜ ಹೊರಟ್ಟಿ ಹೇಳಿದರು.
ಬಸವರಾಜ ಹೊರಟ್ಟಿ – 7076
ಬಸವರಾಜ ಗುರಿಕಾರ- 3314
ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಶಿಕ್ಷಕರ ಬೇಡಿಕೆ ಈಡೇರಿಕೆಗೆ ನಾನು ಸದಾ ಬದ್ದ. ಸಭಾಪತಿ ಆಗಿದ್ದರಿಂದ ಹೋರಾಟ ನಡೆಸಲು ಆಗಿರಲಿಲ್ಲ. ಈಗ ಮತ್ತಷ್ಟು ಹೋರಾಟ ನಡೆಸಲಿದ್ದೇನೆ ಎಂದರು.
ಮುಂದೆ ಸಭಾಪತಿ ಅಥವಾ ಸಚಿವ ಸ್ಥಾನ ಪಕ್ಷಕ್ಕೆ ಬಿಟ್ಟ ವಿಷಯ ಎಂದು ಪ್ರಶ್ನೆಯೊಂದಕ್ಕೆ ಹೇಳಿದರು.




