February 4, 2026

ಮಲ್ಪೆ: ನಾಗರಹಾವು ಕಚ್ಚಿ ವ್ಯಕ್ತಿ ಸಾವು

0
image_editor_output_image65081827-1655278054526.jpg

ಮಲ್ಪೆ: ನಾಗರಹಾವು ಕಚ್ಚಿ ಆಸ್ಪತ್ರೆಗೆ ದಾಖಲಾಗಿದ್ದ ಕಿದಿಯೂರಿನ ಸುಧಾಕರ ಅಮೀನ್ (55) ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮನೆಯ ಕೋಣೆಯ ಕಪಾಟಿನ ಮೇಲಿದ್ದ ಅಂಗಿಯನ್ನು ತೆಗೆಯಲು ಕಪಾಟಿಗೆ ಕೈ ಹಾಕಿದಾಗ ಕಪಾಟಿನಲ್ಲಿದ್ದ ನಾಗರಹಾವು ಸುಧಾಕರ ಅಮೀನ್ ಅವರಿಗೆ ಕಚ್ಚಿತ್ತು. ಕೂಡಲೇ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂ. 13ರಂದು ಮಧ್ಯಾಹ್ನ ಅವರು ಮೃತಪಟ್ಟರು.

ಮೃತರ ಅಕ್ಕ ವನಜಾ ಅವರು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!