ಬೈಕ್ ಸ್ಕಿಡ್: ಸವಾರ ಸ್ಥಳದಲ್ಲೇ ಸಾವು
ವಿಜಯಪುರ: ಬೈಕ್ ಸ್ಕಿಡ್ ಆಗಿ, ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೂಡಗಿ ತಾಂಡಾ ಬಳಿ ಬುಧವಾರ ನಡೆದಿದೆ.
ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಕೂಡಗಿ ತಾಂಡಾ ನಿವಾಸಿ ಸುನೀಲ್ ರಾಠೋಡ್ (27) ಮೃತ ದುರ್ದೈವಿ.
ಕೂಡಗಿ ಎನ್.ಟಿ.ಪಿ.ಸಿ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.




