ಮಂಗಳೂರು ರಸ್ತೆ ಬದಿ ಕಸ ಎಸೆಯುತ್ತಿದ್ದ ವ್ಯಕ್ತಿಗೆ 20 ಸಾವಿರ ರೂ. ದಂಡ
ಮಂಗಳೂರು: ನಗರದಲ್ಲಿ ರಸ್ತೆ ಬದಿ ಕಸ ಎಸೆಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರು ಮಹಾನಗರ ಪಾಲಿಕೆಯಿಂದ 20 ಸಾವಿರ ರೂ. ದಂಡ ವಿಧಿಸಲಾಗಿದೆ. ಕಂಕನಾಡಿ ಬಳಿಯ ರಸ್ತೆಯಲ್ಲಿ ಕಸ ಎಸೆದ ಫಾಸ್ಟ್ ಫುಡ್ ನೌಕರನಿಗೆ ದಂಡ ವಿಧಿಸಲಾಗಿದೆ.
ಈ ಜಾಗದಲ್ಲಿ ಕಸ ಎಸೆದ ಪರಿಣಾಮ ಬ್ಲ್ಯಾಕ್ ಸ್ಪಾಟ್ ನಿರ್ಮಾಣಗೊಂಡಿತ್ತು. ಮಂಗಳೂರು ಮಹಾನಗರ ಪಾಲಿಕೆಯು ಬಳಿಕ ಆ ಪ್ರದೇಶವನ್ನು ಸಂದರಗೊಳಿಸಿತ್ತು. ಅದರ ನಂತರ ಕಸ ಎಸೆಯುವುದು ನಿಯಂತ್ರಣಕ್ಕೆ ಬಂದಿದ್ದರೂ ಇತ್ತೀಚೆಗೆ ಕೆಲವರು ಕಸ ಎಸೆಯುತ್ತಿದ್ದರು.
ಇದನ್ನು ಗಮನಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಕಸ ಎಸೆಯುತ್ತಿದ್ದ ಫಾಸ್ಟ್ ಫುಡ್ ನೌಕರನಿಗೆ 20 ಸಾವಿರ ರೂ. ದಂಡ ವಿಧಿಸಿದ್ದಾರೆ.




