ವಿದ್ಯಾರ್ಥಿನಿಯ ಫೋಟೊ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿದ್ದ ಶಿಕ್ಷಕನ ಬಂಧನ
ಬೆಳಗಾವಿ: ತನ್ನ ಹಳೆಯ ವಿದ್ಯಾರ್ಥಿನಿಯ ಜೊತೆಗೆ ತೆಗಿಸಿಕೊಂಡಿದ್ದ ‘ವೈಯಕ್ತಿಕ’ ಫೋಟೊವೊಂದನ್ನು ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿದ ಶಿಕ್ಷಕರೊಬ್ಬರನ್ನು ಸವದತ್ತಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತಾಲ್ಲೂಕಿನ ಪ್ರೌಢಶಾಲೆಯೊಂದರ ದೈಹಿಕ ಶಿಕ್ಷಣ ಶಿಕ್ಷಕ ಮಹೇಶ ಬಿರಾದಾರ ಬಂಧಿತ ಆರೋಪಿ. ಯುವತಿಗೆ ಬೇರೊಬ್ಬ ವರನೊಂದಿಗೆ ಮದುವೆ ನಿಗದಿಯಾಗಿತ್ತು. ಆದರೆ, ತನ್ನ ವಿದ್ಯಾರ್ಥಿನಿ ಆದಾಗಿನಿಂದಲೂ ಶಿಕ್ಷಕ ಆಕೆಯನ್ನು ಪ್ರೀತಿಸುತ್ತಿದ್ದ. ಮದುವೆ ಮುರಿಯುವ ಉದ್ದೇಶದಿಂದ ತಮ್ಮಿಬ್ಬರ ‘ಸಲುಗೆ’ಯ ಚಿತ್ರಗಳನ್ನು ಮಂಗಳವಾರ ಸ್ಟೇಟಸ್‌ನಲ್ಲಿ ಹಾಕಿದ್ದ.
ಇದರಿಂದ ಕೋಪಗೊಂಡ ಗ್ರಾಮಸ್ಥರು ಬುಧವಾರ ಶಾಲೆಗೆ ನುಗ್ಗಿ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದರು. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಎಚ್ಚೆತ್ತುಕೊಂಡ ಪೊಲೀಸರು ಸ್ಥಳಕ್ಕೆ ಬಂದು ಶಿಕ್ಷಕನನ್ನು ಬಂಧಿಸಿದರು.




