ಐಸಿಸಿ ಟಿ-20 ವಿಶ್ವಕಪ್:
ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 66 ರನ್ ಗಳ ಜಯ
ಅಬುಧಾಬಿ: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭಾರತಕ್ಕೆ 66 ರನ್ ಗಳ ಜಯ ಸಾದಿಸಿದೆ. ಇದರೊಂದಿಗೆ ಟೂರ್ನಿಯ ಮೊದಲ ಗೆಲುವಿನ ನಗೆ ಬೀರಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 210 ರನ್ ಗಳನ್ನು ಪೇರಿಸಿತು. ಇದು 2021 ನೇ ಟಿ-20 ಟೂರ್ನಿಯ ಅತ್ಯಧಿಕ ರನ್. ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 140 ಸೇರಿಸುವುದರೊಂದಿಗೆ ಇಬ್ಬರು ಆಕರ್ಷಕ ಅರ್ಧ ಶತಕವನ್ನು ಸಿಡಿಸದರು. ನಂತರ ಬಂದ ಆಟಗಾರರಾದ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಭಾರತ ತಂಡದ, ಕೆ ಎಲ್ ರಾಹುಲ್ 69(48), ರೋಹಿತ್ ಶರ್ಮಾ74(47), ರಿಷಭ್ ಪಂತ್ 27*(13), ಹಾರ್ದಿಕ್ ಪಾಂಡ್ಯ 35*(13) ರನ್ ಗಳಿಸಿದರು.
ಭಾರತ ನೀಡಿದ 211 ರನ್ನಿನ ಗುರಿಯನ್ನು ಅಫ್ಘಾನಿಸ್ತಾನ ತಂಡವು 20 ಓವರ್ ಗಳಲ್ಲಿ 144 ರನ್ ಗಳಿಸಿ 66 ರನ್ ಗಳಿಗೆ ಸೋಲನ್ನು ಅನುಭವಿಸಿತು. ಅಫ್ಘಾನಿಸ್ತಾನ ತಂಡದ ಆರಂಭಿಕ ಆಟಗಾರರಾದ ಮೊಹಮ್ಮದ್ ಶೆಹಝಾದ್ ಯಾವುದೇ ರನ್ ಕಳೆ ಹಾಕದೆ ಔಟಾದರೆ, ಉಳಿದ ಆಟಗಾರರಿಂದ ಕೂಡ ಯಾವುದೇ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಅಶಕ್ತರಾದರು.
ಅಫ್ಘಾನಿಸ್ತಾನ ತಂಡದ ಹಝ್ರತುಲ್ಲಾ ಝಝಾಯ್ 13(15), ಮೊಹಮ್ಮದ್ ಶೆಹಝಾದ್ 0(4), ರಹ್ಮಾನುಲ್ಲಾ ಗುರ್ಬಾಝ್ 19(10), ಗುಲ್ಬದೀನ್ ನೈಬ್ 18(20), ನಜ್ಬುಲ್ಲಾ ಝದ್ರಾನ್ 11(13), ಮೊಹಮ್ಮದ್ ನಬಿ 35(32), ರಶೀದ್ ಖಾನ್ 0(1) ಕರೀಂ ಜನ್ನತ್ 42*(22), ಶರಫುದ್ದೀನ್ ಅಶ್ರಫ್ 2*(3) ರನ್ ಗಳಿಸಿದರು.
ಭಾರತದ ಬೌಲಿಂಗ್ ನಲ್ಲೂ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ 3, ರವಿಚಂದ್ರನ್ ಅಶ್ವಿನ್ 2, ರವೀಂದ್ರ ಜಡೇಜ, ಜಸ್ಪ್ರಿತ್ ಬುಮ್ರ ತಲಾ 1 ವಿಕೆಟ್ ಪಡೆದು ಮಿಂಚಿದರು.





