ಶ್ರೀನಗರ-ಶಾರ್ಜಾ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನ ನಿರಾಕರಣೆ
ಶ್ರೀನಗರ: 11 ವರ್ಷಗಳ ನಂತರ ಪುನಶ್ಚೇತನಗೊಂಡಿರುವ ಜಮ್ಮು ಮತ್ತು ಕಾಶ್ಮೀರ್ ನ ಶ್ರೀನಗರದಿಂದ ಶಾರ್ಜಾಕ್ಕೆ ಹಾರಾಟಕ್ಕೆ ತನ್ನ ವಾಯುಪ್ರದೇಶವನ್ನು ಬಳಸಲು ಪಾಕಿಸ್ತಾನ ನಿರಾಕರಿಸಿದೆ. ಈ ಕ್ರಮವು ಜಮ್ಮು ಮತ್ತು ಕಾಶ್ಮೀರದ ಜನರ ಮೇಲೆ ಹೆಚ್ಚು ಪರಿಣಾಮ ಬೀರಲಿದೆ.
ಈ ನಿರ್ಧಾರದಿಂದಾಗಿ, ಶ್ರೀನಗರದಿಂದ ಶಾರ್ಜಾಗೆ ವಿಮಾನಗಳು ಉದಯಪುರ, ಅಹಮದಾಬಾದ್ ಮತ್ತು ಒಮಾನ್ ಮೂಲಕ ಹಾರಾಟ ಮಾಡಬೇಕಾಗಿರುವುದರಿಂದ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮಾತ್ರವಲ್ಲದೆ ವಿಮಾನ ಯಾತ್ರೆಯ ದುಬಾರಿಯಾಗಲಿದೆ.
ಅಕ್ಟೋಬರ್ 23 ರಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶ್ರೀನಗರದ ಶೇಖ್ ಉಲ್-ಆಲಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಉದ್ಘಾಟನಾ ಶ್ರೀನಗರ-ಶಾರ್ಜಾ ವಿಮಾನವನ್ನು ಫ್ಲ್ಯಾಗ್ ಆಫ್ ಮಾಡಿದರು, 11 ವರ್ಷಗಳ ನಂತರ ಕಣಿವೆ ಮತ್ತು ಯುಎಇ ನಡುವಿನ ನೇರ ವಿಮಾನ ಸಂಪರ್ಕವನ್ನು ಪುನರುಜ್ಜೀವನಗೊಳಿಸಿದರು.
ಶ್ರೀನಗರ ವಿಮಾನ ನಿಲ್ದಾಣದಿಂದ ದುಬೈಗೆ ಮೊದಲ ಅಂತರರಾಷ್ಟ್ರೀಯ ವಿಮಾನವನ್ನು ಫೆಬ್ರವರಿ 14, 2009 ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಾರಂಭಿಸಿತು. ಆದರೆ, ಬೇಡಿಕೆ ಕಡಿಮೆಯಾದ ಕಾರಣ ಸೇವೆಯನ್ನು ಸ್ಥಗಿತಗೊಳಿಸಲಾಯಿತು.




